ಚಿಕ್ಕಮಗಳೂರು:ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ನಡೆಸಿ, ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹಠಕ್ಕೆ ಬಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಇಂದು ತೀವ್ರ ಮುಜುಗರಕ್ಕೆ ಒಳಗಾಗಿರುವ ಘಟನೆ ನಡೆದಿದೆ.
ಬಿಜೆಪಿ ಪಕ್ಷದ ತೀರ್ಮಾನದ ವಿರುದ್ಧ ನಿಂತ ಅಧ್ಯಕ್ಷರಿಗೆ ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯರು ಸಾಮಾನ್ಯ ಸಭೆಗೆ ಹಾಜರಾಗದ ಕಾರಣ ಇಂದು ನಡೆಯಬೇಕಿದ್ದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಕೋರಂ ಕೊರತೆಯಿಂದ ಮೊಟಕುಗೊಂಡಿದೆ.
ಸಾಮಾನ್ಯ ಸಭೆಗೆ ಹಾಜರಾಗದ ಸದಸ್ಯರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಖುರ್ಚಿಯ ಕಾದಾಟ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಾರಕಕ್ಕೆ ಏರಿದ್ದು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಇಂದು ಕರೆದಿದ್ದ ಸರ್ವ ಸದಸ್ಯರ ಸಭೆಯನ್ನು ಮತ್ತೆ ಕೋರಂ ಕೊರತೆಯ ಕಾರಣ ಮುಂದೂಡಲಾಯಿತು.
ಅಕ್ಟೋಬರ್ 20ರಂದು ಸುಜಾತ ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಭೆ ಕರೆಯಲಾಗಿತ್ತು. ಆದರೆ, ಸುಜಾತ ಕೃಷ್ಣಪ್ಪ ಅವರ ರಾಜೀನಾಮೆ ವಿಚಾರವಾಗಿ ಸ್ವಪಕ್ಷೀಯ ಸದಸ್ಯರೇ ಸಭೆಗೆ ಗೈರಾದ ಕಾರಣದಿಂದ ಸಭೆಯನ್ನು ಇಂದಿಗೆ ಮುಂದೂಡಲಾಗಿತ್ತು.
ಸ್ವ ಪಕ್ಷದ ಮುಖಂಡರ ವಿಶ್ವಾಸಗಳಿಸಿ ಸಭೆ ನಡೆಸುತ್ತೇನೆಂದು ಹಠಕ್ಕೆ ಬಿದ್ದಿದ್ದ ಅಧ್ಯಕ್ಷರಿಗೆ ಬಿಜೆಪಿ ಸದಸ್ಯರು ಶಾಕ್ ನೀಡಿದ್ದಾರೆ. ಯಾವೊಬ್ಬ ಜಿಲ್ಲಾ ಪಂಚಾಯತ್ ಸದಸ್ಯರು ಸಭೆಗೆ ಹಾಜರಾಗದೇ ಅಧ್ಯಕ್ಷರ ರಾಜೀನಾಮೆಗೆ ಪರೋಕ್ಷವಾಗಿ ಒತ್ತಾಯಿಸಿದ್ದಾರೆ.