ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಿನಲ್ಲಿ ಹೆಚ್ಚಿದ ಕೊರೊನಾ ಭೀತಿ... ಲಾಕ್​ಡೌನ್​ ಘೋಷಿಸಿದ ಜಿಲ್ಲಾಧಿಕಾರಿ - ಲಾಕ್​ಡೌನ್​ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ಹೇಳಿಕೆ,

ಚಿಕ್ಕಮಗಳೂರು ಜಿಲ್ಲಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯನ್ನ ನಿಯಂತ್ರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಲಾಕ್‍ಡೌನ್​ ಮೊರೆ ಹೋಗಿದೆ.

Chikkamagaluru DC Ramesh, Chikkamagaluru DC Ramesh talk about corona increase, Chikkamagaluru DC Ramesh talk about lockdown, Chikkamagaluru DC Ramesh news, ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್​, ಕೊರೊನಾ ಹೆಚ್ಚಳ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ಹೇಳಿಕೆ, ಲಾಕ್​ಡೌನ್​ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ಹೇಳಿಕೆ, ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ಸುದ್ದಿ,
ಲಾಕ್​ಡೌನ್​ ಘೋಷಿಸಿದ ಜಿಲ್ಲಾಧಿಕಾರಿ

By

Published : Apr 23, 2021, 10:10 AM IST

ಚಿಕ್ಕಮಗಳೂರು:ಕೊರೋನಾ ಎರಡನೇ ಅಲೆಯ ಆರಂಭದ ದಿನಗಳಲ್ಲಿ ಪ್ರತಿನಿತ್ಯ 20-30-40 ಬರುತ್ತಿದ್ದ ಕೊರೋನಾ ಕೇಸ್‌ಗಳ ಸಂಖ್ಯೆ ಕಳೆದ ಮೂರ್ನಾಲ್ಕು ದಿನದಿಂದ ನೂರರ ಗಡಿ ದಾಟಿದೆ. ನಿನ್ನೆ ಜಿಲ್ಲೆಯಲ್ಲಿ 198 ಪ್ರಕರಣಗಳು ಪತ್ತೆಯಾಗಿವೆ. ಹೀಗೆ ದಿನೇ ದಿನೆ ಹೆಚ್ಚುತ್ತಿರೋ ಕೇಸ್‍ಗಳನ್ನ ನಿಯಂತ್ರಿಸಲು ಜಿಲ್ಲಾಡಳಿತ ಲಾಕ್‍ಡೌನ್‍ಗೆ ಮುಂದಾಗಿದ್ದು, ನಿನ್ನೆಯಿಂದ ಮೇ 4ರವರೆಗೆ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಲಾಕ್​ಡೌನ್​ ಘೋಷಿಸಿದ ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಇದನ್ನ ನಿಯಂತ್ರಣ ಮಾಡದಿದ್ದರೆ ಮುಂದೆ ಬಹಳ ಅನಾಹುತವಾಗಲಿದೆ ಎಂದು ಜಿಲ್ಲಾಧಿಕಾರಿ ರಮೇಶ್​ ಲಾಕ್‍ಡೌನ್ ನಿರ್ಧಾರಕ್ಕೆ ಮುಂದಾಗಿದ್ದು, ಸಾರ್ವಜನಿಕರು ಈ ಹೆಮ್ಮಾರಿ ಕೊರೊನಾವನ್ನ ನಿಯಂತ್ರಿಸಲು ನಮ್ಮ ಜೊತೆ ಕೈಜೋಡಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಅಗತ್ಯ ವಸ್ತುಗಳನ್ನ ಹೊರತುಪಡಿಸಿ ಇಡೀ ಜಿಲ್ಲೆಯನ್ನ ಲಾಕ್‍ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಇಂದಿನಿಂದ 13 ದಿನಗಳ ಕಾಲ ಜಿಲ್ಲೆಯಲ್ಲಿ ಸಿನಿಮಾ ಟಾಕೀಸ್, ಮಾಲ್, ದೇವಸ್ಥಾನ, ಚರ್ಚ್, ಮಸೀದಿ, ಶಾಲಾ-ಕಾಲೇಜು ಎಲ್ಲವೂ ಬಂದ್ ಇರಲಿವೆ. ಅಗತ್ಯ ವಸ್ತುಗಳ ಅಂಗಡಿ-ಮುಂಗಟ್ಟುಗಳನ್ನ ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು 13 ದಿನ ಬಂದ್ ಮಾಡುವಂತೆ ಆದೇಶಿಸಿಲಾಗಿದೆ. ಅಗತ್ಯ ವಸ್ತುಗಳ ಮಾರಾಟ ಅಂಗಡಿಯಲ್ಲೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನ ಕಡ್ಡಾಯವಾಗಿ ಕಾಪಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ABOUT THE AUTHOR

...view details