ಚಿಕ್ಕಮಗಳೂರು:ತಾಲೂಕಿನ ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ರತ್ನಾಕರ್ ಹಾಗೂ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ನಡುವೆ ಸರ್ಕಾರಿ ಕಟ್ಟಡ ಕೆಡವಿದ ಕುರಿತು ನಡೆದ ಫೋನ್ ಸಂಭಾಷಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸ್ಪಷ್ಟನೆ ನೀಡಿದ್ದು, ಈ ಕುರಿತು ನಿಮಗೆ ಮತ್ತೊಮ್ಮೆ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.
ಪಿಡಿಓಗೆ ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ, ಸ್ಪಷ್ಟನೆ ನೀಡಲು ಮುಂದಾದ ಡಾ. ಬಗಾದಿ ಗೌತಮ್ - ತಾಲೂಕಿನ ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ರತ್ನಾಕರ್
ತಾಲೂಕಿನ ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ರತ್ನಾಕರ್ ಹಾಗೂ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ನಡುವೆ ಸರ್ಕಾರಿ ಕಟ್ಟಡ ಕೆಡವಿದ ಕುರಿತು ನಡೆದ ಫೋನ್ ಸಂಭಾಷಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸ್ಪಷ್ಟನೆ ನೀಡಿದ್ದು, ಈ ಕುರಿತು ನಿಮಗೆ ಮತ್ತೊಮ್ಮೆ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.
ಪಿಡಿಓಗೆ ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ, ಸ್ಪಷ್ಟನೆ ನೀಡಲು ಮುಂದಾದ ಡಾ. ಬಗಾದಿ ಗೌತಮ್
ಮಲ್ಲೇನಹಳ್ಳಿ ಪಿಡಿಒ ರತ್ನಾಕರ್ ಅವರು ಸರ್ಕಾರಿ ಕಟ್ಟಡ ಕೆಡವಿದಕ್ಕೆ ಮಾತುಕತೆ ಆಗಿದೆ ಅಷ್ಟೆ. ಅದು ಕೆಪಿಟಿಸಿಎಲ್ ಗೆ ಸೇರಿದ ಕಟ್ಟಡವಾಗಿದ್ದು, ಈ ವಿಚಾರವಾಗಿ ಫೋನಿನಲ್ಲಿ ಚರ್ಚೆ ಮಾಡಲಾಗಿದೆ. ಪ್ರಮುಖವಾಗಿ ಪಿಡಿಒ ಸರ್ಕಾರಿ ಕಟ್ಟಡವನ್ನು ಬೀಳಿಸಿದ್ದಾರೆ. ಈ ಕುರಿತು ಚರ್ಚೆ ಮಾಡಲಾಗಿದೆ ಬೇರೆ ಏನು ಇಲ್ಲ ಎಂಬ ಉತ್ತರವನ್ನು ನೀಡಿ ಬಗಾದಿ ಗೌತಮ್ ಅವರು ಆಡಿಯೋ ಪ್ರಕರಣದ ಕುರಿತು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.
ಇದನ್ನು ಓದಿ:ಪಿಡಿಓಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಚಿಕ್ಕಮಗಳೂರು ಡಿಸಿ, ಆಡಿಯೋ ವೈರಲ್
TAGGED:
The audio case is clear