ಚಿಕ್ಕಮಗಳೂರು : ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ತಾಲೂಕಿನ ಮಲ್ಲೇನಹಳ್ಳಿ ಪಿಡಿಒ ಜೊತೆ ಮಾತನಾಡುವ ವೇಳೆ ಸಂಯಮ ಕಳೆದುಕೊಂಡು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿರುವ ಆಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಿಡಿಓಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಚಿಕ್ಕಮಗಳೂರು ಡಿಸಿ, ಆಡಿಯೋ ವೈರಲ್ - Chikkamagaluru DC abusing audio goes viral
ಮಲ್ಲೇನಹಳ್ಳಿಯ ಪಿಡಿಒ ರತ್ನಾಕರ್ ಅವರಿಗೆ ಕರೆ ಮಾಡಿರುವ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಮಾತನಾಡುವ ವೇಳೆ ಸಂಯಮ ಕಳೆದುಕೊಂಡು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ. ಈ ಆಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿಕ್ಕಮಗಳೂರು ಡಿಸಿ
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿರುವ ಪಾಳು ಬಿದ್ದ ಕೆಪಿಟಿಸಿಎಲ್ ಕಟ್ಟಡ ಕೆಡವಿದ್ದಕ್ಕೆ ಜಿಲ್ಲಾಧಿಕಾರಿ ಕೆಂಡಾಮಂಡಲರಾಗಿದ್ದು, ನಿನ್ನ ಯಾರು ಪಿಡಿಒ ಮಾಡಿದ್ದು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಮಲ್ಲೇನಹಳ್ಳಿಯ ಪಿಡಿಒ ರತ್ನಾಕರ್ ಅವರಿಗೆ ಕರೆ ಮಾಡಿ, ನಿನ್ನ ಮೇಲೆ ಎಫ್ಐಆರ್ ಬುಕ್ ಮಾಡಿಸುತ್ತೇನೆ. ಸರಿಯಾಗಿ ಮಾತನಾಡೋದಕ್ಕೆ ಕಲಿತುಕೋ. ಕುಡಿದು ಮಾತನಾಡುತ್ತಿದ್ದೀಯಾ? ನಿನ್ನನ್ನು ಸಸ್ಪೆಂಡ್ ಮಾಡುತ್ತೇನೆ, ಬಿ ರೆಡಿ ಎಂದು ಬೆದರಿಕೆ ಹಾಕಿದ್ದಾರೆ.
Last Updated : Mar 16, 2020, 12:10 AM IST