ಕರ್ನಾಟಕ

karnataka

ETV Bharat / state

ಕಾಫಿನಾಡಲ್ಲಿ ದತ್ತ ಜಯಂತಿ ಸಂಭ್ರಮ; ನಗರದೆಲ್ಲೆಡೆ ಕೇಸರಿ ಕಲರವ - ಸಚಿವ ಸಿ.ಟಿ.ರವಿ, ಸಂಸದೆ ಶೋಭಾ ಕರಂದ್ಲಾಜೆ

ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತಾ ಕೇಂದ್ರವಾಗಿರೋ ಕಾಫಿನಾಡಿನ ದತ್ತಪೀಠದಲ್ಲಿ ಇಂದಿನಿಂದ 3 ದಿನಗಳ ಕಾಲ ದತ್ತಜಯಂತಿ ಸಂಭ್ರಮವಿರಲಿದೆ.

chikkamagaluru-datta-jayanti-excitement-news
ಕಾಫಿನಾಡಿನಲ್ಲಿ ದತ್ತ ಜಯಂತಿ ಸಂಭ್ರಮ

By

Published : Dec 27, 2020, 10:36 PM IST

ಚಿಕ್ಕಮಗಳೂರು:ಚಿಕ್ಕಮಗಳೂರಿನ ಎಲ್ಲೆಡೆಯೂ ದತ್ತ ಜಯಂತಿ ಪ್ರಯುಕ್ತ ಇದೀಗ ಕೇಸರಿ ಕಲರವ. ಅಯೋಧ್ಯೆ ರಾಮ ಮಂದಿರದ ಕನಸು ಸಾಕಾರಗೊಂಡಂತೆ, ದತ್ತಪೀಠದಲ್ಲಿ ದತ್ತಾತ್ರೇಯನ ಮಂದಿರ ಸಾಕಾರವಾಗುತ್ತದೆ ಎಂಬ ವಿಶ್ವಾಸ ಹೋರಾಟಗಾರರಲ್ಲಿ ಮೂಡಿದೆ.

ಕಾಫಿನಾಡಿನಲ್ಲಿ ದತ್ತ ಜಯಂತಿ ಸಂಭ್ರಮ

ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತಾ ಕೇಂದ್ರವಾಗಿರೋ ಕಾಫಿನಾಡಿನ ದತ್ತಪೀಠದಲ್ಲಿ ಇಂದಿನಿಂದ 3 ದಿನಗಳ ಕಾಲ ದತ್ತಜಯಂತಿ ಸಂಭ್ರಮ ಕಳೆಗಟ್ಟಲಿದೆ. ದತ್ತ ಜಯಂತಿಯ ಮೊದಲ ದಿನವಾದ ಇಂದು ಅನುಸೂಯ ಜಯಂತಿಯನ್ನು ಸಾವಿರಕ್ಕೂ ಅಧಿಕ ಮಹಿಳೆಯರು ಸಂಭ್ರಮದಿಂದ ಆಚರಿಸಿದರು.

ಓದಿ: ರಾಜ್ಯದಲ್ಲಿಂದು 911 ಮಂದಿಗೆ ಕೋವಿಡ್ ಸೋಂಕು, 11 ಸೋಂಕಿತರು ಬಲಿ‌

ಭಕ್ತರು ಚಿಕ್ಕಮಗಳೂರು ನಗರದ ಬೋಳರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಗರದ ಐಜಿ ರಸ್ತೆ ಮೂಲಕ ಕಾಮಧೇನು ಗಣಪತಿ ದೇವಾಲಯದವರೆಗೂ ಸಂಕೀರ್ತನಾ ಯಾತ್ರೆ ಕೈಗೊಂಡರು. ಮೆರವಣಿಗೆಯಲ್ಲಿ ಸಚಿವ ಸಿ.ಟಿ.ರವಿ, ಸಂಸದೆ ಶೋಭಾ ಕರಂದ್ಲಾಜೆ, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ ಮುಖಂಡರಾದ ತಾರಾ, ಮಾಳವಿಕಾ ಸೇರಿದಂತೆ ಸಾವಿರಾರು ಮಹಿಳೆಯರು ಭಾಗವಹಿಸಿದರು.

ಮೆರವಣಿಗೆ ಬಳಿಕ ದತ್ತಪೀಠಕ್ಕೆ ತೆರಳಿದ ಮಹಿಳೆಯರು ದತ್ತಪಾದುಕೆ ದರ್ಶನ ಪಡೆದು, ದತ್ತಪೀಠದ ಪೂರ್ವ ದಿಕ್ಕಿನ ಚಪ್ಪರದಲ್ಲಿ ಭಜನೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದರು.

ದತ್ತಪೀಠದಲ್ಲಿ ತ್ರಿಕಾಲ ಪೂಜೆಗೆ ಅವಕಾಶ ಕಲ್ಪಿಸಿ ಹಿಂದೂ ಅರ್ಚಕರ ನೇಮಕ ಮಾಡಬೇಕು. ಅಲ್ಲದೇ ದತ್ತಪೀಠವನ್ನು ಹಿಂದೂಗಳ ಪುಣ್ಯಕ್ಷೇತ್ರವೆಂದು ಘೋಷಿಸುವುದರ ಜೊತೆಗೆ ಅನುಸೂಯಾ ದೇವಿಗೊಂದು ಭವನ ನಿರ್ಮಿಸಬೇಕೆಂದು ಭಕ್ತರು ಆಗ್ರಹಿಸಿದರು.

ABOUT THE AUTHOR

...view details