ಕರ್ನಾಟಕ

karnataka

ETV Bharat / state

ಪುನೀತ್ ಸ್ಫೂರ್ತಿ: ದೇಹದಾನದ ವಾಗ್ದಾನ ಮಾಡಿದ್ರು ಕಾಫಿ ನಾಡಿನ ದಂಪತಿ - ನಟ ಪುನೀತ್​ ರಾಜಕುಮಾರ್​ ಅಭಿಮಾನಿಗಳು ನೇತ್ರದಾನ

ನಟ ಪುನೀತ್​​ ರಾಜಕುಮಾರ್​ ಅವರ ಸಾಮಾಜಿಕ ಕಾರ್ಯಗಳಿಂದ ಪ್ರೇರಣೆಗೊಂಡ ಕಾಫಿನಾಡು ಚಿಕ್ಕಮಗಳೂರಿನ ದಂಪತಿ ಸುಪ್ರಿತ್​ ಮತ್ತು ಲಕ್ಷ್ಮಿ ದೇಹದಾನಕ್ಕೆ ಮುಂದಾಗಿದ್ದಾರೆ. ಪುನೀತ್ ಸರ್ ಕಣ್ಣಿನಿಂದ ನಾಲ್ಕು ಜನರ ಬದುಕಲ್ಲಿ ಬೆಳಕು ಮೂಡಿದೆ. ನಮ್ಮ ದೇಹದ ಅಂಗಾಂಗಳಿಂದ ಹಲವರ ಬದುಕಲ್ಲಿ ಬೆಳಕು ಮೂಡಬಹುದು. ಅದಕ್ಕೆ ಮನೆಯವರ ಜೊತೆ ಮಾತನಾಡಿ ಈ ನಿರ್ಧಾರಕ್ಕೆ ಬಂದಿದ್ದೇವೆ ಈ ದಂಪತಿ ತಿಳಿಸಿದ್ದಾರೆ.

chikkamagalore-couple-decided-to-donated-body
ಕಾಫಿ ನಾಡಿನ ದಂಪತಿ

By

Published : Nov 13, 2021, 4:43 PM IST

ಚಿಕ್ಕಮಗಳೂರು: ಸಾಮಾಜಿಕ ಕಾರ್ಯಗಳಿಂದ ಪವರ್ ಸ್ಟಾರ್ ಪುನೀತ್​ ರಾಜಕುಮಾರ್ (Puneeth Rajkumar)​ ಯುವಜನತೆಯ ಮನದಲ್ಲಿ ಐಕಾನ್ ಆಗಿ ಉಳಿದಿದ್ದಾರೆ. ಅವರಿಂದ ಪ್ರೇರೇಪಣೆಗೊಂಡು ಸಾವಿರಾರು ಜನ ನೇತ್ರದಾನಕ್ಕೆ ಮುಂದಾಗಿದ್ದಾರೆ. ಆದರೆ, ಕಾಫಿನಾಡ ದಂಪತಿ ದೇಹ ದಾನದ ವಾಗ್ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ತಾಲೂಕಿನ ಅರೆನೂರು ಗ್ರಾಮದ ದಂಪತಿ ಸುಪ್ರಿತ್‍ (31) ಲಕ್ಷ್ಮಿ (23) ಈ ನಿರ್ಧಾರ ಕೈಗೊಂಡಿರುವ ದಂಪತಿ. ಗ್ರಾಮ ಪಂಚಾಯತ್​ ಅಧ್ಯಕ್ಷೆಯಾಗಿರುವ ಲಕ್ಷ್ಮಿ ಅವರು ಪವರ್ ಸ್ಟಾರ್ ಕಟ್ಟಾ ಅಭಿಮಾನಿ. ಸದ್ಯ ಅಪ್ಪು ಸ್ಫೂರ್ತಿಯಿಂದ ದೇಹದಾನ ಮಾಡಲು ನಿರ್ಧರಿಸಿದ್ದಾರೆ.

ಪುನೀತ್ ಸರ್ ಕಣ್ಣಿನಿಂದ ನಾಲ್ಕು ಜನರ ಬದುಕಲ್ಲಿ ಬೆಳಕು ಮೂಡಿದೆ. ನಮ್ಮ ದೇಹದ ಅಂಗಾಂಗಳಿಂದ ಹಲವರ ಬದುಕಲ್ಲಿ ಬೆಳಕು ಮೂಡಬಹುದು. ಅದಕ್ಕೆ ಮನೆಯವರ ಜೊತೆ ಮಾತನಾಡಿ ಈ ನಿರ್ಧಾರಕ್ಕೆ ಬಂದಿದ್ದೇವೆ ಅಂತಾರೆ ದಂಪತಿ.

40ಕ್ಕೂ ಹೆಚ್ಚು ಜನರಿಂದ ನೇತ್ರದಾನಕ್ಕೆ ನಿರ್ಧಾರ:ಇಂದು ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿಯವರ ಊರಾದ ತಾಲೂಕಿನ ಮಲ್ಲಂದೂರು ಸಮೀಪದ ಭಾಗ್‍ಮನೆ ಬಳಿ ಇರುವ ಆವುತಿ ಗ್ರಾಮದಲ್ಲಿ ಪುನೀತ್ ಶ್ರದ್ಧಾಂಜಲಿ ಕಾರ್ಯಕ್ರಮವನ್ನ ಏರ್ಪಡಿಸಲಾಗಿತ್ತು. ಈ ವೇಳೆ, ಸುಮಾರು 40 ಕ್ಕೂ ಹೆಚ್ಚು ಜನ ನೇತ್ರದಾನಕ್ಕೆ ಮುಂದಾಗಿ, ಹೆಸರು ನೋಂದಾಯಿಸಿಕೊಂಡಿದ್ದಾರೆ.

ABOUT THE AUTHOR

...view details