ಚಿಕ್ಕಮಗಳೂರು:ಹೆಜ್ಜೇನು ದಾಳಿಗೆ ಚಿಕ್ಕಮಗಳೂರು ಜಿಲ್ಲೆಯ ಕಾಫಿ ಮಂಡಳಿ ಮಾಜಿ ಅಧ್ಯಕ್ಷರು ಬಲಿಯಾದ ಘಟನೆ ನಡೆದಿದೆ. ಎಂ.ಎಸ್.ಭೋಜೆಗೌಡ (73) ಮೃತ ದುರ್ದೈವಿಯಾಗಿದ್ದು, ತಾಲೂಕಿನ ಕೃಷ್ಣಗಿರಿ ಕಾಫಿ ತೋಟದಲ್ಲಿ ಈ ದುರಂತ ಘಟನೆ ನಡೆದಿದೆ.
ಹೆಜ್ಜೇನು ದಾಳಿಗೆ ಚಿಕ್ಕಮಗಳೂರು ಕಾಫಿ ಮಂಡಳಿ ಮಾಜಿ ಅಧ್ಯಕ್ಷ ಬಲಿ - ಹೆಜ್ಜೇನು ದಾಳಿಗೆ ಚಿಕ್ಕಮಗಳೂರು ಕಾಫಿ ಮಂಡಳಿ ಅಧ್ಯಕ್ಷ ಬಲಿ
ಚಿಕ್ಕಮಗಳೂರು ತಾಲೂಕಿನ ಕೃಷ್ಣಗಿರಿ ತೋಟದಲ್ಲಿ ಹೆಜ್ಜೇನು ದಾಳಿಗೆ ಕಾಫಿ ಮಂಡಳಿ ಮಾಜಿ ಅಧ್ಯಕ್ಷ ಎಂ.ಎಸ್.ಭೋಜೆಗೌಡ ಮೃತಪಟ್ಟಿದ್ದಾರೆ.
ಕಾಫಿ ಮಂಡಳಿ ಅಧ್ಯಕ್ಷ
ಸಾವಿರಾರು ಹೆಜ್ಜೇನುಗಳು ದಾಳಿ ಮಾಡಿದ್ದರಿಂದ ಭೋಜೆಗೌಡರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭೋಜೇಗೌಡರು ಸತತ 2ನೇ ಬಾರಿಗೆ ಕಾಫಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 1 ಬಾರಿ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿಯೂ ಎಂ.ಎಸ್. ಬೋಜೇಗೌಡ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ:ದೇಶದ ಎಲ್ಲ ಮುಸಲ್ಮಾನರು ರಾಷ್ಟ್ರ ದ್ರೋಹಿಗಳಲ್ಲ: ಕೆ.ಎಸ್.ಈಶ್ವರಪ್ಪ
Last Updated : Apr 23, 2022, 4:45 PM IST