ಚಿಕ್ಕಮಗಳೂರು: ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ಟ್ರ್ಯಾಕ್ಟರ್ ನೇಗಿಲಿಗೆ ಬೃಹತ್ ಗಾತ್ರದ ನಾಗರಹಾವೊಂದು ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿರುವ ಘಟನೆ ನಡೆದಿದೆ.
ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿದ ನಾಗರಹಾವು: ಚಿಕಿತ್ಸೆ ಫಲಕಾರಿಯಾಗದೆ ಸಾವು - ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿದ ನಾಗರಹಾವು
ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಗುಬ್ಬಿಗಾ ಗ್ರಾಮದ ಜಮೀನೊಂದರಲ್ಲಿ ಉಳುಮೆ ಮಾಡುತ್ತಿರುವಾಗ ಟ್ರ್ಯಾಕ್ಟರ್ ನೇಗಿಲಿಗೆ ಬೃಹತ್ ಗಾತ್ರದ ನಾಗರಹಾವೊಂದು ಸಿಲುಕಿ ಸಾವನ್ನಪ್ಪಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಗುಬ್ಬಿಗಾ ಗ್ರಾಮದಲ್ಲಿ ಗೋಪಾಲ್ ಆಚಾರ್ ಎಂಬುವರು ತಮ್ಮ ಜಮೀನಿನಲ್ಲಿ ಉಳುಮೆ ಮಾಡುವ ವೇಳೆ ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿ ಸುಮಾರು 10 ವರ್ಷದ ಬೃಹತ್ ಗಾತ್ರದ ನಾಗರ ಹಾವು ಗಂಭೀರವಾಗಿ ಗಾಯವಾಗಿತ್ತು. ಇದನ್ನು ನೋಡಿದ ಟ್ರ್ಯಾಕ್ಟರ್ ಚಾಲಕ ಕೂಡಲೇ ಉರಗ ತಜ್ಞ ಹರೀಂದ್ರ ಅವರಿಗೆ ಫೋನ್ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಹರೀಂದ್ರ ಅವರು ಈ ನಾಗರಹಾವನ್ನು ರಕ್ಷಣೆ ಮಾಡಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಿದ್ದರು. ಎನ್ ಆರ್ ಪುರ ದಲ್ಲಿರುವ ಪಶು ಆಸ್ಪತ್ರೆಯಲ್ಲಿ ವೈದ್ಯ ವಿಜಯ್ ಕುಮಾರ್ ಅವರು ಸುಮಾರು ಒಂದು ಗಂಟೆಗೂ ಅಧಿಕ ಕಾಲ ಚಿಕಿತ್ಸೆ ನೀಡಿದ್ರೂ ಕೂಡ ಯಾವುದೇ ರೀತಿಯಾ ಪ್ರಯೋಜನವಾಗಿಲ್ಲ. ಕೊನೆಗೂ ನಾಗರಹಾವು ಸಾವನ್ನಪ್ಪಿದೆ.