ಕರ್ನಾಟಕ

karnataka

ETV Bharat / state

ಮದುವೆಗೆ ಅಡ್ಡಿಪಡಿಸಿದ ಸ್ಥಳದಲ್ಲೇ ಮದುವೆಯಾದ ಜೋಡಿ - ಈಟಿವಿ ಭಾರತ ಕನ್ನಡ

ಲವ್​ ಜಿಹಾದ್​ ಎಂದು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಮದುವೆ ನೋಂದಣಿಗೆ ಅಡ್ಡಿಪಡಿಸಿದ ಜೋಡಿ, ಇಂದು ಹಾರ ಬದಲಾಯಿಸಿಕೊಂಡು ಮದುವೆಯಾಗಿರುವ ಘಟನೆ ಚಿಕ್ಕಮಗಳೂರು ಸಬ್ ರಿಜಿಸ್ಟ್ರಾರ್ ಕಚೇರಿ ಎದುರು ನಡೆದಿದೆ.

chikkamagalur-lovers-got-married-at-sub-registrar-office
ಮದುವೆಗೆ ಅಡ್ಡಿಪಡಿಸಿದ ಸ್ಥಳದಲ್ಲೇ ಮದುವೆಯಾದ ಜೋಡಿ

By

Published : Sep 17, 2022, 4:03 PM IST

ಚಿಕ್ಕಮಗಳೂರು: ಮದುವೆ ನೋಂದಣಿಗೆ ಅಡ್ಡಿಪಡಿಸಿದ ಸ್ಥಳದಲ್ಲೇ ಹಾರ ಬದಲಾಯಿಸಿಕೊಂಡು ಜೋಡಿಯೊಂದು ಮದುವೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಚಿಕ್ಕಮಗಳೂರು ಸಬ್ ರಿಜಿಸ್ಟ್ರಾರ್ ಕಚೇರಿ ಎದುರು ಜಾಫರ್ ಮತ್ತು ಚೈತ್ರಾ ಮದುವೆ ಮಾಡಿಕೊಂಡು, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ದಾಸರಳ್ಳಿಯ ಲಕ್ಷೀಪುರ ಗ್ರಾಮದ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ಇಬ್ಬರೂ ವಿವಾಹ ನೋಂದಣಿಗೆ ಎಂದು ನಗರದ ರತ್ನಗಿರಿ ರಸ್ತೆಯಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ್ದರು. ಈ ಬಗ್ಗೆ ತಿಳಿದ ಹಿಂದೂ ಸಂಘಟನೆಯ ಕೆಲವು ಯುವಕರು 'ಇದು ಲವ್ ಜಿಹಾದ್ ಪ್ರಕರಣ' ಎಂದು ಆರೋಪಿಸಿ ಯುವತಿಯನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆ ತಂದಿದ್ದರು.

ಮದುವೆಗೆ ಅಡ್ಡಿಪಡಿಸಿದ ಸ್ಥಳದಲ್ಲೇ ಮದುವೆಯಾದ ಜೋಡಿ

ಈಗ ಮದುವೆಗೆ ಅಡ್ಡಿಪಡಿಸಿದ ಕಚೇರಿಯಲ್ಲಿ ಜೋಡಿ ಮದುವೆಯಾಗಿದ್ದು, ನವ ಜೋಡಿಗೆ ಮುಸ್ಲಿಂ ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರು ಸಾತ್​ ನೀಡಿದ್ದಾರೆ.

ಇದನ್ನೂ ಓದಿ :ಚಿಕ್ಕಮಗಳೂರು: ನಮ್ಮನ್ನು ತಡೆಯೋಕೆ ಅವರು ಯಾರು..? ಸಂಘಟನೆ ವಿರುದ್ಧ ಪ್ರೇಮಿಗಳ ಆಕ್ರೋಶ

ABOUT THE AUTHOR

...view details