ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಚಾರ್ಮಾಡಿ ಘಾಟ್​ನಲ್ಲಿ ಮತ್ತೆ ಬಸ್​ ಸಂಚಾರಕ್ಕೆ ನಿರ್ಬಂಧ - Chikkamagalur Charmadi Ghat news

ಚಾರ್ಮಾಡಿ ಘಾಟ್​ನಲ್ಲಿ ಬಸ್​ ಸಂಚಾರದ ಆದೇಶಕ್ಕೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ತಾತ್ಕಾಲಿಕವಾಗಿ ತಡೆ ನೀಡಿದ್ದಾರೆ. ನಿನ್ನೆ ಸಂಜೆ ಬಸ್-ಲಾರಿಗಳ ಸಂಚಾರಕ್ಕೆ ಅನುಮತಿ ನೀಡಿ ಎಂದು ಆದೇಶ ಹೊರಡಿಸಲಾಗಿತ್ತು.

ಚಾರ್ಮಾಡಿ ಘಾಟ್​ನಲ್ಲಿ ಮತ್ತೆ ಬಸ್​ ಸಂಚಾರಕ್ಕೆ ನಿರ್ಬಂಧ
ಚಾರ್ಮಾಡಿ ಘಾಟ್​ನಲ್ಲಿ ಮತ್ತೆ ಬಸ್​ ಸಂಚಾರಕ್ಕೆ ನಿರ್ಬಂಧ

By

Published : Mar 18, 2021, 9:42 PM IST

Updated : Mar 19, 2021, 11:38 AM IST

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ಬಸ್ ಸಂಚಾರ ಆದೇಶ ವಾಪಸ್ ಪಡೆದು ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಆದೇಶ ಪ್ರತಿ

ಬಸ್​ ಸಂಚಾರದ ಆದೇಶಕ್ಕೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ತಾತ್ಕಾಲಿಕವಾಗಿ ತಡೆ ನೀಡಿದ್ದು, ಚಾರ್ಮಾಡಿ ಘಾಟ್​ನಲ್ಲಿ ಮತ್ತೆ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಇದೀಗ ಲಘು ವಾಹನಗಳ ಸಂಚಾರಕ್ಕಷ್ಟೇ ಅನುಮತಿ ನೀಡಲಾಗಿದೆ.

ಚಾರ್ಮಾಡಿ ಘಾಟ್​ನಲ್ಲಿ ಮತ್ತೆ ಬಸ್​ ಸಂಚಾರಕ್ಕೆ ನಿರ್ಬಂಧ

ಓದಿ:2 ವರ್ಷಗಳ ಬಳಿಕ ಚಾರ್ಮಾಡಿ ಘಾಟಿಯಲ್ಲಿ ಕೆಎಸ್​ಆರ್​ಟಿಸಿ ಬಸ್ ಸಂಚಾರಕ್ಕೆ ಅವಕಾಶ

ನಿನ್ನೆ ಸಂಜೆ ಬಸ್-ಲಾರಿಗಳ ಸಂಚಾರಕ್ಕೆ ಅನುಮತಿ ನೀಡಿ ಎಂದು ಆದೇಶ ಹೊರಡಿಸಲಾಗಿತ್ತು. ಇದೀಗ ಮಂಗಳೂರು ಡಿಸಿ ಸೂಚನೆ ಮೇರೆಗೆ ಮತ್ತೆ ನಿಷೇಧ ಹೇರಲಾಗಿದ್ದು, ಸಂಜೆ ಆದೇಶವನ್ನ ತಾತ್ಕಾಲಿಕವಾಗಿ ಹಿಂಪಡೆದಿದ್ದರಿಂದ ಲಾರಿ ಚಾಲಕರು ಪರದಾಡುವಂತಾಯಿತು.

Last Updated : Mar 19, 2021, 11:38 AM IST

ABOUT THE AUTHOR

...view details