ಕರ್ನಾಟಕ

karnataka

ETV Bharat / state

ಬಿಹಾರದಲ್ಲಿ ಚಿಕ್ಕಮಗಳೂರಿನ ಯೋಧ ನಿಗೂಢ ಸಾವು - army man died in bihar

ಬಿಹಾರದಲ್ಲಿಅನುಮಾನವಾಗಿ ಸಾವನ್ನಪ್ಪಿದ ಚಿಕ್ಕಮಗಳೂರಿನ ಯೋಧನ ಮೃತದೇಹ ಬಿಹಾರದ ಕಿಶನ್ ಗಂಜ್ ನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಸೇನೆಯ ಅಧಿಕಾರಿಗಳು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಮಾಹಿತಿ ನೀಡಿದ್ದಾರೆ.

chikkamagalur-army-man-died-in-bihar
ಚಿಕ್ಕಮಗಳೂರಿನ ಯೋಧನ ಸಾವು ಇನ್ನೂ ನಿಗೂಢ

By

Published : Jun 13, 2022, 11:02 PM IST

ಚಿಕ್ಕಮಗಳೂರು : ಬಿಹಾರದಲ್ಲಿ ಚಿಕ್ಕಮಗಳೂರಿನ ಯೋಧ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮೃತದೇಹ ಬಿಹಾರದ ಕಿಶನ್ ಗಂಜ್ ನಲ್ಲಿ ಪತ್ತೆಯಾಗಿದೆ. ಎಂ.ಎನ್ ಗಣೇಶ್ ಚಿಕ್ಕಮಗಳೂರು ತಾಲೂಕಿನ ಮಸಿಗದ್ದೆ ಗ್ರಾಮದವರಾಗಿದ್ದು, ಕಳೆದ ಏಪ್ರಿಲ್ 24 ರಂದು ರಜೆ ಮೇಲೆ ಊರಿಗೆ ಬಂದಿದ್ದರು. ಮೊನ್ನೆ ಜೂನ್ 9ರಂದು ಗ್ರಾಮದಿಂದ ಕರ್ತವ್ಯಕ್ಕೆ ಹಾಜರಾಗಲು ತೆರಳಿದ್ದಾರೆ. ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಯೋಧ ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರಿನ ಯೋಧನ ಸಾವು ಇನ್ನೂ ನಿಗೂಢ

ಸೇನಾಧಿಕಾರಿಗಳಿಂದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಅವರಿಗೆ ಮಾಹಿತಿ ನೀಡಿದ್ದು, ಅಸ್ಸಾಂ ಆರ್ಮಿಯಿಂದ ಬಿಹಾರದಲ್ಲಿ ತನಿಖೆ ನಡೆಸಲಾಗುತ್ತಿದೆ.
ಓದಿ :ಕ್ಯಾನ್ಸರ್​ ಪೀಡಿತರಿಗೆ ಇಲ್ಲಿ ತರಕಾರಿ ಉಚಿತ: ಎಲ್ಲಿ ಗೊತ್ತಾ?

ABOUT THE AUTHOR

...view details