ಚಿಕ್ಕಮಗಳೂರು: ಚಿಕ್ಕಬಳ್ಳಾಪುರದಿಂದ ದೇವರ ದರ್ಶನಕ್ಕೆ ಹೊರಟಿದ್ದ ಪ್ರವಾಸಿಗರ ವ್ಯಾನ್ ಬ್ರೇಕ್ ಫೇಲ್ ಆಗಿ ಪಕ್ಕದ ಮೋರಿಗೆ ಗುದ್ದಿ, ಗುಂಡಿಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗಲು ಗ್ರಾಮದ ಬಳಿ ನಡೆದಿದೆ.
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಕೊಟ್ಟಿಗೆಹಾರ ಮಾರ್ಗದಿಂದ ಧರ್ಮಸ್ಥಳಕ್ಕೆ ಹೊರಟ ವೇಳೆ ಈ ದುರಂತ ನಡೆದಿದೆ. ವಾಹನದಲ್ಲಿದ್ದ 13 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.