ಕರ್ನಾಟಕ

karnataka

ETV Bharat / state

ವರ್ಷಧಾರೆಯ ರಭಸಕ್ಕೆ ಬೆಚ್ಚಿಬಿದ್ದ ಮಲೆನಾಡು: ವರುಣನ ಆರ್ಭಟಕ್ಕೆ ಹೈರಾಣಾದ ಜನ - ಚಿಕ್ಕಮಗಳೂರು ಮಳೆ ಸುದ್ದಿ

ಜಿಲ್ಲೆಯಲ್ಲಿ ಬೆಳಗ್ಗಿನಿಂದಲೂ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಈಗ ಧಾರಕಾರ ಮಳೆಯಾಗುತ್ತಿದ್ದು, ಮಳೆಯ ರಭಸವನ್ನು ನೋಡಿ ಮಲೆನಾಡಿಗರು ಬೆಚ್ಚಿ ಬೀಳುವಂತಾಗಿದೆ.

ವರ್ಷಧಾರೆಯ ರಭಸಕ್ಕೆ ಬೆಚ್ಚಿಬಿದ್ದ ಮಲೆನಾಡು

By

Published : Oct 20, 2019, 9:15 PM IST

ಚಿಕ್ಕಮಗಳೂರು :ನಗರ ಸೇರಿದಂತೆ ಮಲೆನಾಡು ಭಾಗದಲ್ಲಿ ಗುಡುಗು ಮಿಶ್ರಿತ ಧಾರಕಾರ ಮಳೆಯಾಗುತ್ತಿದ್ದು, ಮಲೆನಾಡಿನ ಜನರು ವರ್ಷಧಾರೆಗೆ ಹೈರಾಣಾಗಿ ಹೋಗಿದ್ದಾರೆ.

ಪ್ರಮುಖವಾಗಿ ಚಿಕ್ಕಮಗಳೂರು ನಗರ, ವಸ್ತಾರೆ, ಮೂಗ್ತಿಹಳ್ಳಿ, ಮೂಡಿಗೆರೆ, ಕೊಟ್ಟಿಗೆಹಾರ, ಜಾವಳಿ, ಬಾಳೆಹೊನ್ನೂರು, ಜಯಪುರ, ಕೊಪ್ಪ, ಸೇರಿದಂತೆ ಸುತ್ತ ಮುತ್ತಲ ಭಾಗದಲ್ಲಿ ಧಾರಕಾರ ಮಳೆಯಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ಥ ಮತ್ತು ಹಲವಾರು ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ವರ್ಷಧಾರೆಯ ರಭಸಕ್ಕೆ ಬೆಚ್ಚಿಬಿದ್ದ ಮಲೆನಾಡು

ಜಿಲ್ಲೆಯಲ್ಲಿ ಬೆಳಗ್ಗಿನಿಂದಲೂ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಮಳೆಯಾಗುವ ಮುನ್ಸೂಚನೆ ಇತ್ತು . ಈಗ ಧಾರಕಾರ ಮಳೆಯಾಗುತ್ತಿದ್ದು, ಮಳೆಯ ರಭಸವನ್ನು ನೋಡಿ ಮಲೆನಾಡಿಗರು ಬೆಚ್ಚಿ ಬಿದ್ದಿದ್ದಾರೆ.

ABOUT THE AUTHOR

...view details