ಕರ್ನಾಟಕ

karnataka

ETV Bharat / state

ಕಮಿಷನ್​ ಆಸೆ ತೋರಿಸಿ ಆನ್​ಲೈನ್​ನಲ್ಲಿ ಹಣ ಪೀಕುತ್ತಿದ್ದ 'ಕ್ಯೂ ನೆಟ್​' ದಂಧೆಕೋರರ ಸೆರೆ - ಆನ್​​ಲೈನ್​ನಲ್ಲಿ ಮೋಸ ಮಾಡುತ್ತಿದ್ದ ಆರೋಪಿಗಳ ಬಂಧನ

ಜನರಿಗೆ ಹೆಚ್ಚಿನ ಕಮಿಷನ್ ಹಣದ ಆಸೆ ತೋರಿಸಿ ಕ್ಯೂ-ನೆಟ್ ಹೆಸರಿನಲ್ಲಿ ಸಾರ್ವಜನಿಕರಿಂದ ಹಣವನ್ನು ವಂಚನೆ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಪ್ರಶಾಂತ್, ಮಲ್ಲಿಕಾರ್ಜನ್, ಕೀರ್ತಿರಾಜ್, ಕಾರ್ತಿಕ್ ಬಂಧಿತ ಆರೋಪಿಗಳು

ಚಿಕ್ಕಮಗಳೂರು ನಗರ ಪೊಲೀಸ್​ ಠಾಣೆ

By

Published : Sep 10, 2019, 7:36 PM IST

ಚಿಕ್ಕಮಗಳೂರು: ಬಿಟ್ ಕಾಯಿನ್ ಮತ್ತು ಐ ಕಾಯಿನ್ ಆನ್ ಲೈನ್ ವಂಚನೆ ಜಾಲ ಹಸಿಯಾಗಿರುವ ಬೆನ್ನಲ್ಲೇ ಚಿಕ್ಕಮಗಳೂರು ನಗರ ಠಾಣೆಯ ಪೋಲಿಸರು ಇದೇ ರೀತಿಯಾ ಇನ್ನೋಂದು ಜಾಲವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಜನರಿಗೆ ಹೆಚ್ಚಿನ ಕಮಿಷನ್ ಹಣದ ಆಸೆ ತೋರಿಸಿ ಕ್ಯೂ-ನೆಟ್ ಹೆಸರಿನಲ್ಲಿ ಸಾರ್ವಜನಿಕರಿಂದ ಹಣವನ್ನು ವಂಚನೆ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಪ್ರಶಾಂತ್, ಮಲ್ಲಿಕಾರ್ಜನ್, ಕೀರ್ತಿರಾಜ್, ಕಾರ್ತಿಕ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ, ವಂಚೆನೆಗೆ ಬಳಸುತ್ತಿದ್ದ ವಸ್ತುಗಳು ಮತ್ತು ಹಣದ ಸೈಪಿಂಗ್ ಉಪಕರಣವನ್ನು ವಶಕ್ಕೆ ಪಡೆದಿದ್ದಾರೆ. ಇದೊಂದು ಚೈನ್ ಲಿಂಕ್ ದಂಧೆಯಾಗಿದ್ದು ಒಬ್ಬರೂ ಇನ್ನೋಬ್ಬರನ್ನು ಇಲ್ಲಿಗೆ ತಂದು ಸೇರಿಸಿದರೆ ಅವರಿಗೆ ಕಮಿಷನ್ ಹಣ ನೀಡೋದಾಗಿ ಆಸೆ ಹುಟ್ಟಿಸಿದ್ದಾರೆ. ಇದು ಮಲ್ಟಿ ನೆಂಟ್ವರ್ಕಿಂಗ್ ದಂಧೆಯಾಗಿದ್ದು ಕ್ಯೂ- ನೆಟ್ ಹೆಸರಿನಲ್ಲಿ 30 ಸಾವಿರಕ್ಕೂ ಅಧಿಕ ಹಣ ಸಾರ್ವಜನಿಕರಿಂದ ಪೀಕಾಲಾಗಿದೆ ಎಂದೂ ಈಟಿವಿ ಭಾರತ್ ಗೆ ಪೋಲಿಸ್ ಮೂಲಗಳು ಮಾಹಿತಿ ನೀಡಿವೆ.

ಇನ್ನು ಲಕ್ಷಾಂತರ ರೂಪಾಯಿ ಹಣವನ್ನು ಸಾರ್ವಜನಿಕರಿಂದ ವಸೂಲಿ ಮಾಡಿರುವ ಶಂಕೆಯನ್ನು ಪೋಲಿಸರು ವ್ಯಕ್ತಪಡಿಸುತ್ತಿದ್ದಾರೆ. ಈ ಚೈನ್ ಲಿಂಕ್ ಮಾಹಿತಿ ಬಗ್ಗೆ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ನೀಡಿದ ಬೆನ್ನಲ್ಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

For All Latest Updates

TAGGED:

ABOUT THE AUTHOR

...view details