ಕರ್ನಾಟಕ

karnataka

ETV Bharat / state

ಮಗನ ಚಿಕಿತ್ಸೆಗೆ ಹಣವಿಲ್ಲದೆ ಪೋಷಕರ ಪರದಾಟ - ಚಿಕಿತ್ಸೆಗಾಗಿ ಹಣ ವಿಲ್ಲದೆ ಪರದಾಟ

ಮಗನಿಗೆ ಚಿಕಿತ್ಸೆ ಕೊಡಿಸಲಾಗದೆ ಕುಟುಂಬವೊಂದು ಪರದಾಡುತ್ತಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳ್ಳಿಕೆರೆ ಗ್ರಾಮದಲ್ಲಿ ನಡೆದಿದ್ದು, ಲಾಕ್​ಡೌನ್​ನಿಂದಾಗಿ ಕೆಲಸವಿಲ್ಲದೆ ಔಷಧ ತರಲು ಕಾಸಿಲ್ಲದೆ ಕಣ್ಣೀರಲ್ಲಿಯೇ ದಿನ ಕಳೆಯುತ್ತಿದ್ದಾರೆ.

chikkamagalore-lock-down-family-suffering-to-get-medicine-to-there-son
ಪೋಷಕರ ಪರದಾಟ

By

Published : May 1, 2020, 3:08 PM IST

ಚಿಕ್ಕಮಗಳೂರು: ಲಾಕ್‌ಡೌನ್ ಎಫೆಕ್ಟ್​ನಿಂದಾಗಿ ಮಗನಿಗೆ ಚಿಕಿತ್ಸೆ ಕೊಡಿಸಲಾಗದೆ ಕುಟುಂಬವೊಂದು ಮೂಡಿಗೆರೆ ತಾಲೂಕಿನ ಹಳ್ಳಿಕೆರೆ ಗ್ರಾಮದಲ್ಲಿ ಕಣ್ಣೀರು ಹಾಕುತ್ತಿದೆ.

ಮಗನ ಚಿಕಿತ್ಸೆಗೆ ಹಣವಿಲ್ಲದೆ ಪೋಷಕರ ಪರದಾಟ

ಕೂಲಿ ಕಾರ್ಮಿಕ ಅಣ್ಣಪ್ಪ-ಅನ್ನಪೂರ್ಣ ದಂಪತಿ ವಿಶೇಷಚೇತನ ಪುತ್ರ ಅನುಷ್​​ (5 ವರ್ಷ) ಅನಾರೋಗ್ಯದಿಂದ ಬಳಲುತ್ತಿದ್ದು, ಪ್ರತಿ ತಿಂಗಳು ಶಿವಮೊಗ್ಗಕ್ಕೆ ತೆರಳಿ ಔಷಧ ತರಬೇಕಾಗಿತ್ತು. ಸದ್ಯ ಲಾಕ್​ಡೌನ್​ನಿಂದ ಕೆಲಸವಿಲ್ಲದೆ ಕೈಯಲ್ಲಿ ಕಾಸಿಲ್ಲದೆ ಅಣ್ಣಪ್ಪ ಮಗನ ಚಿಕಿತ್ಸೆಗಾಗಿ ಕಷ್ಟ ಅನುಭವಿಸುತ್ತಿದ್ದಾರೆ.

ಈಗಾಗಲೇ ಮಗನ ಚಿಕಿತ್ಸೆಗೆ 10 ಲಕ್ಷಕ್ಕೂ ಹೆಚ್ಚು ಹಣವನ್ನು ಪೋಷಕರು ಖರ್ಚು ಮಾಡಿದ್ದಾರೆ. ಸದ್ಯ ಮೇಲೆ ಏಳಲು ಆಗದೇ ನೆಲದಲ್ಲೇ ತೆವಳುತ್ತಿರುವ ಮಗನನ್ನು ಕಂಡು ದಂಪತಿ ಕಣ್ಣೀರು ಹಾಕುತ್ತಾ ಕಾಲ ಕಳೆಯುವಂತಾಗಿದೆ.

ABOUT THE AUTHOR

...view details