ಚಿಕ್ಕಮಗಳೂರು :ಜಿಲ್ಲೆಯ ಮೂಡಿಗೆರೆಯ ಬಿಳುಗುಳ ನಿವಾಸಿ ಮಹಿಳೆ ಪೆಟ್ರೋಲ್ ಹಾಕಿಕೊಂಡು ಮೃತಪಟ್ಟ ಪ್ರಕರಣ ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿದ್ದು, ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಮರ್ಮ ತಿಳಿಯದಂತಾಗಿದೆ.
ಬಿಳಗುಳ ನಿವಾಸಿ ಸವಿತಾ (42) ಎಂಬುವವರು ಕೌಟುಂಬಿಕ ಕಲಹದಿಂದ ಪತಿಯನ್ನು ಬಿಟ್ಟು ತವರು ಮನೆಗೆ ಬಂದು ಹೋಂ ಸ್ಟೇ ಒಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ಆಗ ಅವರಿಗೆ ಅಲ್ಲೇ ಸಮೀಪದ ದುರ್ಗಾ ಪರಮೇಶ್ವರಿ ಎಸ್ಟೇಟ್ನಲ್ಲಿ ರೈಟರ್ ಆಗಿ ಕೆಲಸ ಮಾಡ್ತಿದ್ದ ಕೊಲ್ಲಿಬೈಲ್ ನಿವಾಸಿ ನಂದೀಶ (28) ಎಂಬುವವನ ಪರಿಚಯವಾಗಿತ್ತು.
ಕೊಲೆಯೋ, ಆತ್ಮಹತ್ಯೆಯೋ 'ಪೆಟ್ರೋಲ್ ಸಾವಿನ ಮರ್ಮ' ಕಳೆದ ಒಂದು ವರ್ಷದಿಂದ ಅನ್ಯೋನ್ಯವಾಗಿದ್ದ ಇರ್ವರ ನಡುವೆ ಯಾವೊದೋ ಕಾರಣಕ್ಕೆ ಜಗಳ ಶುರುವಾಗಿದೆ. ತುಂಬಾ ಹತ್ತಿರವಾಗಿದ್ದ ಇವರಿಬ್ಬರ ಸಂಬಂಧ ಬ್ರೇಕ್ ಆಗಿದೆ. ಅದು ಎಲ್ಲಿವರೆಗೆ ಅಂದ್ರೆ ನಾನು ಪೆಟ್ರೋಲ್ ಹಾಕ್ಕೊಂಡ್ ಸಾಯ್ತೇನಿ ಅಂತಾ ಹೇಳುವ ಹಂತಕ್ಕೆ ತಲುಪಿತ್ತು.
ಇದನ್ನು ನೋಡಿ-ಯೋಗೇಶ್ ಗೌಡ ಹತ್ಯೆ ಪ್ರಕರಣ: ಮಾಜಿ ಸಚಿವ ವಿನಯ್ಗೆ ಮತ್ತೊಂದು ಸಂಕಷ್ಟ
ಇದೇ ಮಾತನ್ನು ಮೊನ್ನೆ ಸವಿತಾ, ನಂದೀಶ್ ಬಳಿಯಲ್ಲಿ ಹೇಳಿದ್ದಾರೆ. ಆಗ, ನಿಂದು ಬರೀ ಇದೆ ಆಯ್ತು, ಹಾಗಿದ್ರೆ ಸಾಯಿ ನೋಡೋಣ, ನಾನು ಬೆಂಕಿ ಪೊಟ್ಟಣ ತರ್ತೀನಿ ಅಂತಾ ನಂದೀಶ್ ಹೇಳಿದ್ದನಂತೆ ಅಷ್ಟೇ.. ಮುಂದೆ ನಡೆದಿದ್ದೆಲ್ಲಾ ಮೊಬೈಲ್ನಲ್ಲಿ ಡಿಸ್ಕಶನ್ ಮಾಡಿದ ಹಾಗೆಯೇ ದುರ್ಗಾಪರಮೇಶ್ವರಿ ಎಸ್ಟೇಟ್ನ ಮುಂಭಾಗ ಪೆಟ್ರೋಲ್ ನಿಂದ ಹೊತ್ತಿಕೊಂಡು ಬೆಂಕಿಯಲ್ಲಿ ಸವಿತಾಳ ದೇಹ ಸಂಪೂರ್ಣ ಸುಟ್ಟುಹೋಗಿತ್ತು.
ಬಹುತೇಕ ಸುಟ್ಟು ಹೋಗಿದ್ದ ಸವಿತಾರನ್ನ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಪ್ರಯೋಜನವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಸವಿತಾ ಮೃತಪಟ್ಟಿದ್ದಾರೆ. ಆದರೇ ಈ ಬೆಂಕಿ ಹೇಗೆ ಹೊತ್ತಿಕೊಂಡಿತ್ತು ಅನ್ನೋದು ಇನ್ನೂ ನಿಗೂಢವಾಗಿದೆ. ಯಾಕೆಂದ್ರೆ ನಾನು ಪೆಟ್ರೋಲ್ ಹಾಕ್ಕೊಂಡ್ ಸಾಯ್ತೇನೆ ಅಂತಾ ಸಾಯೋಕೂ ಮೊದಲು ಸವಿತಾ-ನಂದೀಶ್ ಸಂಭಾಷಣೆ ಪೊಲೀಸರಿಗೆ ಸಿಕ್ಕಿದೆ.
ಇದನ್ನು ನೋಡಿ-ಬಿಬಿಎಂಪಿ ಚುನಾವಣೆ ಸಂಬಂಧ ಹೈಕೋರ್ಟ್ ಆದೇಶ ಸ್ವಾಗತಿಸಿದ ಡಿ.ಕೆ.ಶಿವಕುಮಾರ್
ಅಲ್ಲದೇ ನಂದೀಶನ ಎರಡು ಕೈಗಳು ಸುಟ್ಟು ಹೋಗಿದೆ. ಸವಿತಾ ಪೆಟ್ರೋಲ್ ಹಾಕ್ಕೊಂಡ್ ಆತ್ಮಹತ್ಯೆ ಮಾಡಿಕೊಳ್ಳೋ ವೇಳೆಯಲ್ಲಿ ರಕ್ಷಣೆಗೆ ಹೋದಾಗ ನನ್ನ ಕೈ ಸುಟ್ಟಿದೆ ಅಂತಾ ನಂದೀಶ ಹೇಳುತ್ತಿರೋದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ಒಟ್ಟಾರೆಯಾಗಿ, ಈ ನಡುವೆ ಸವಿತಾ ಮನೆಯವರು, ನಂದೀಶನೇ ಕೊಲೆ ಮಾಡಿರುವುದಾಗಿ ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂದೀಶ್ ವಿರುದ್ಧ ಎಫ್ಐಆರ್ ದಾಖಲು ಮಾಡಿರೋ ಪೊಲೀಸರು, ಸದ್ಯ ಆಸ್ಪತ್ರೆ ಪಾಲಾಗಿರೋ ನಂದೀಶ ಗುಣಮುಖವಾಗೋದನ್ನೇ ಕಾಯ್ತಿದ್ದಾರೆ.