ಚಿಕ್ಕಮಗಳೂರು: ಪ್ರವಾಸೋದ್ಯಮವನ್ನೇ ನಂಬಿದ್ದ ಜನರು ಕೊರೊನಾ ವೈರಸ್ ಬಂದ ದಿನದಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಅತಂತ್ರ ಸ್ಥಿತಿಯಲ್ಲಿದ್ದ ನೂರಾರು ಕುಟುಂಬಗಳ ಬದುಕನ್ನು ಕೊನೆಗೂ ಜಿಲ್ಲಾಡಳಿತ ಬದುಕಿಸಿದೆ, ಪ್ರವಾಸಿಗರಿಗೆ ಬರಲು ಮುಕ್ತ ಅವಕಾಶ ನೀಡಿದೆ. ಕೊರೊನಾ ಆತಂಕದ ನಡುವೆಯು ಆನಿವಾರ್ಯತೆಯಲ್ಲಿ ಪ್ರವಾಸಿಗರನ್ನು ಬರಮಾಡಿಕೊಳ್ಳಲು ಇಲ್ಲಿನ ಜನರು ರೆಡಿಯಾಗಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ಕೊರೊನಾ ಭೀತಿಯ ನಡುವೆಯೂ ಪ್ರವಾಸಿಗರಿಗೆ ಕಾಫಿನಾಡಿಗೆ ಬರಲು ಅವಕಾಶ ಹೌದು, ಕೊರೊನಾ ಪ್ರಾರಂಭವಾದಾಗಿನಿಂದಲೂ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸೋದ್ಯಮ ನೆಲಕಚ್ಚಿ ಸಂಪೂರ್ಣ ಪ್ರವಾಸೋದ್ಯಮವೇ ಅಲ್ಲೋಲ ಕಲ್ಲೋಲ ಆಗಿತ್ತು. ಅದನ್ನೇ ಬದುಕು ಅಂದುಕೊಂಡು ಇದರಿಂದ ಜೀವನ ನಡೆಸುತ್ತಿದ್ದ ಜನರೇ ಕೊರೊನಾ ಮಹಾಮಾರಿಯನ್ನು ತಡೆಯೋಕೆ ಹೊಟ್ಟೆ ಪಾಡನ್ನು ಬಿಟ್ಟು ಪ್ರವಾಸಿಗರ ನಿಷೇಧಕ್ಕೆ ಸಾಥ್ ನೀಡಿದ್ದರು. ದಿನೇ ದಿನೇ ಮಹಾಮಾರಿಯ ಅಟ್ಟಹಾಸದಿಂದ ಜನರು ನಲುಗಿದ್ದರೆ. ಪ್ರವಾಸಿಗರನ್ನೇ ನಂಬಿದ್ದವರ ಬದುಕು ನರಕವಾದಂತಾಗಿತ್ತು.
ಆದರೇ ಈಗ ಜಿಲ್ಲಾಡಳಿತ ಮತ್ತೆ ಜಿಲ್ಲೆಯಲ್ಲಿ ಪ್ರವಾಸಿಗರಿಗೆ ಅವಕಾಶ ನೀಡಿದೆ. ಅಂತರ ಕಾಪಾಡೋದು, ಸ್ಯಾನಿಟೈಸಿಂಗ್ ಸೇರಿದಂತೆ ಕೆಲವೊಂದು ನಿರ್ಬಂಧ ಹೇರಿ ಪ್ರವಾಸೋದ್ಯಮಕ್ಕೆ ಚಾಲನೆ ನೀಡಿದೆ. ಆದರೇ ಪ್ರವಾಸಿ ಸ್ಥಳಗಳಿಗೆ ಬರುತ್ತಿರುವಂತಹ ಪ್ರವಾಸಿಗರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಸ್ಯಾನಿಟೈಜರ್ ಉಪಯೋಗಿಸುತ್ತಿಲ್ಲ. ಒಂದು ವಾಹನದಲ್ಲಿಯೇ ಸಾಕಷ್ಟು ಜನರು ಬರುತ್ತಿದ್ದಾರೆ. ಇದರಿಂದ ಇನ್ನಷ್ಟು ಅಪಾಯ ಎದುರಾಗಲಿದೆ ಎಂದು ಕೆಲ ಸ್ಥಳೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಕೊರೊನಾ ಭೀತಿಯ ನಡುವೆಯು ಪ್ರವಾಸಿಗರಿಗೆ ಅವಕಾಶ ನೀಡಿರೋದು ಒಂದೆಡೆ ಅತಂಕವಾದರೂ ಮತ್ತೊಂದೆಡೆ ಆನಿವಾರ್ಯತೆಯೂ ಆಗಿದೆ. ಇದನ್ನೇ ನಂಬಿಕೊಂಡಿರೋ ಸಾವಿರಾರು ಜನರು ಸಮಸ್ಯೆಯ ಸುಳಿಯಲ್ಲಿ ಸಿಲುಕ್ಕಿದ್ದವರು ಇದರಿಂದ ಹೊರ ಬರೋಕೆ ಕೊಂಚ ಸಾಧ್ಯವಾಗಿದೆ. ಕಾಫಿ ನಾಡಿಗರಲ್ಲಿ ಗರಿಷ್ಟ ಪ್ರಮಾಣದ ಜನರ ಬದುಕೇ ಪ್ರವಾಸೋದ್ಯಮ ಅಗಿರೋದರಿಂದ ಹೊರ ಜಿಲ್ಲೆಗಳಿಂದ ಬರೋ ಪ್ರವಾಸಿಗರ ಮೇಲೆ ಅದೇಶಕ್ಕಿಂತಲೂ ಕಟ್ಟು ನಿಟ್ಟಿನ ಕ್ರಮವಹಿಸುವಂತೆ ಮನವಿಯನ್ನು ಮಾಡಲಾಗುತ್ತಿದೆ.ಇದಲ್ಲದೆ ನಿಗಾವಹಿಸೋಕೆ ಸ್ಥಳೀಯರ ತಂಡವನ್ನು ರಚಿಸಿದರೆ ಜಿಲ್ಲಾಡಳಿತಕ್ಕೂ ರೋಗದ ಭೀತಿ ಹರಡದಂತೆ ಕ್ರಮವಹಿಸಬಹುದು ಅನ್ನೋ ಮಾತುಗಳು ಕೇಳಿ ಬಂದಿದೆ.
ಒಟ್ಟಾರೆಯಾಗಿ ಚಿಕ್ಕಮಗಳೂರು ಜಿಲ್ಲೆಯ ನೂರಾರು ಕುಟುಂಬಗಳು ಕೊರೊನಾ ವೈರಸ್ ನಿಂದ ಪ್ರವಾಸೋದ್ಯಮಕ್ಕೆ ಬಿದ್ದ ಭಾರಿ ಹೊಡೆದಕ್ಕೆ ನಲುಗಿ ಹೋಗಿವೆ. ಸ್ಥಗಿತವಾಗಿದ್ದ ಪ್ರವಾಸಿಗರಿಗೆ ಮತ್ತೆ ಅವಕಾಶ ನೀಡಲಾಗಿದೆ. ಕೊರೊನಾ ಆಂತಕದ ನಡುವೆಯೂ ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಜನರು ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಾಗಿದೆ.