ಕರ್ನಾಟಕ

karnataka

ಚಿಕ್ಕಮಗಳೂರು ಜಿಲ್ಲೆಯ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ

By

Published : Jan 4, 2021, 5:42 PM IST

ಪೊಲೀಸ್​ ಇಲಾಖೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಚಿಕ್ಕಮಗಳೂರು ಜಿಲ್ಲೆಯ ಇಬ್ಬರು ಅಧಿಕಾರಿಗಳು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಗೊಂಡಿದ್ದಾರೆ.

chief-ministers-medal-awarded-to-two-police-officers-in-chikkamagalur-district
ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ

ಚಿಕ್ಕಮಗಳೂರು:ಪೊಲೀಸ್​ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಜಿಲ್ಲೆಯ ಇಬ್ಬರು ಅಧಿಕಾರಿಗಳು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.

ಡಿಸಿಐಬಿ ಪೊಲೀಸ್ ನಿರೀಕ್ಷಕ ಕೆ.ಸತ್ಯನಾರಾಯಣ್ ಹಾಗೂ ಜಿಲ್ಲಾ ಉಪ ವಿಭಾಗದ ಡಿ.ಟಿ.ಪ್ರಭು ಅವರಿಗೆ 2019ನೇ ಸಾಲಿನ ಸಿಎಂ ಪ್ರಶಸ್ತಿ ಲಭಿಸಿದೆ. ಕೆ.ಸತ್ಯನಾರಾಯಣ್ ಕಳೆದ 30 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ನಗರದ ಸಂಚಾರಿ ಠಾಣೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರ 2018ರಲ್ಲಿ ರಾಷ್ಟ್ರಪತಿ ಪದಕ ನೀಡಿ ಗೌರವಿಸಿತ್ತು. ಇದೀಗ ಮುಖ್ಯಮಂತ್ರಿಗಳ ಪದಕಕ್ಕೂ ಆಯ್ಕೆಯಾಗಿದ್ದಾರೆ.

ಓದಿ:ಇಂಗ್ಲಿಷ್ ಪದದ ಸ್ಪೆಲ್ಲಿಂಗ್ ಉಲ್ಟಾ ಹೇಳೋದ್ರಲ್ಲಿ ನಿಸ್ಸೀಮ ಈ ಪೋರ!

ಇತ್ತೀಚೆಗೆ ಚಿಕ್ಕಮಗಳೂರಿನ ಉಪ ವಿಭಾಗದ ಡಿವೈಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿರುವ ಡಿ.ಟಿ.ಪ್ರಭು ಮೂಲತಃ ಕಲಬುರಗಿಯವರಾಗಿದ್ದು, ಈ ಹಿಂದೆ ಅವರು ಗೋಕಾಕ್‌ನಲ್ಲಿ ಸೇವೆ ಸಲ್ಲಿಸಿ ಜಿಲ್ಲೆಗೆ ವರ್ಗವಾಗಿ ಬಂದಿದ್ದಾರೆ. ಇದೀಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ABOUT THE AUTHOR

...view details