ಕರ್ನಾಟಕ

karnataka

ETV Bharat / state

ಒತ್ತುವರಿ ತೆರವುಗೊಳಿಸಿದ ಅರಣ್ಯ ಇಲಾಖೆ.. ಬಡವರ ಮೇಲೆ ಏಕೆ ಕಣ್ಣು ಎಂದು ಗ್ರಾಮಸ್ಥರ ಆಕ್ರೋಶ..

ಒಕ್ಕಲೆಬ್ಬಿಸುವ ವೇಳೆಯಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಅನ್ನೋ ಕಾನೂನಿದೆ. ಆದ್ರೆ, ಅರಣ್ಯ ಇಲಾಖೆಯವರು ಅವೈಜ್ಞಾನಿಕ ಸಮೀಕ್ಷೆ ನಡೆಸಿದ್ದು, ಸೂಕ್ತ ಪರಿಹಾರ ನೀಡದೇ ತರಾತುರಿಯಲ್ಲಿ ನಮ್ಮನ್ನ ಒಕ್ಕಲೆಬ್ಬಿಸಲು ಸಂಚು ರೂಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..

chickmagaluru people outrage on forest officers
ಅರಣ್ಯ ಇಲಾಖೆ ಮೇಲೆ ಗ್ರಾಮಸ್ಥರ ಆಕ್ರೋಶ

By

Published : Jun 27, 2021, 7:06 PM IST

ಚಿಕ್ಕಮಗಳೂರು: ಮಸಗಲಿ ಗ್ರಾಮದ ಹತ್ತಾರು ಕುಟುಂಬಗಳು ತಲೆತಲಾಂತರದಿಂದ ಆ ಕಾಫಿಗಿಡಗಳನ್ನೇ ನಂಬಿ ಜೀವನ ನಡೆಸುತ್ತಿದ್ದರು. ಆದ್ರೀಗ ಅರಣ್ಯ ಇಲಾಖೆಯವರು ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ಕತ್ತರಿಸಿ ಹಾಕಿದ್ದಲ್ಲದೇ ಇಲ್ಲಿಂದ ಜಾಗವನ್ನೇ ಖಾಲಿ ಮಾಡಿ ಅನ್ನೋ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.

ಕಡಿದು ಹಾಕಿರೋ ಕಾಫಿ ಗಿಡಗಳನ್ನು ಡಿಸಿ ಕಚೇರಿ ಎದುರು ತಂದು ಅಸಮಾಧಾನ ಹೊರ ಹಾಕಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮಸಗಲಿ ಎಂಬ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ 4 ಎಕರೆ ಕಾಫಿ ತೋಟವನ್ನು ಕಡಿದು ಹಾಕಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕಾಫಿತೋಟಗಳನ್ನೇ ನಂಬಿ ಜೀವನ ಮಾಡ್ತಿದ್ದ ಕುಟುಂಬಗಳು ಇದೀಗ ಬೀದಿಗೆ ಬಿದ್ದಿದೆ.

ಅರಣ್ಯ ಇಲಾಖೆ ಮೇಲೆ ಗ್ರಾಮಸ್ಥರ ಆಕ್ರೋಶ

ಕಳೆದ ವರ್ಷವೂ ಇದೇ ರೀತಿ ಕಾಫಿಗಿಡಗಳನ್ನ ಕಡಿದು ಹಾಕಿದ್ದ ಅರಣ್ಯ ಇಲಾಖೆ, 22 ಕುಟುಂಬಗಳನ್ನು ಬೀದಿಗೆ ತಂದಿದೆ ಅನ್ನೋ ಆರೋಪವಿದೆ. ಈ ಬಾರಿಯೂ ಕೊರೊನಾ, ಲಾಕ್​ಡೌನ್‌ನಿಂದ ಬಡವರ ಬದುಕು ಮೂರಾಬಟ್ಟೆಯಾಗಿದ್ರೂ ಈ ರೀತಿ ಏಕಾಏಕಿ ಕಾಫಿಗಿಡಗಳನ್ನು ಕತ್ತರಿಸಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಮಸಗಲಿ ಗ್ರಾಮ ಸೇರಿದಂತೆ 7 ಗ್ರಾಮದ 211 ಕುಟುಂಬಗಳು 375 ಎಕರೆ ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಲು ಕೋರ್ಟ್ ಆದೇಶ ನೀಡಿರೋದ್ರಿಂದ ಅರಣ್ಯ ಇಲಾಖೆ ಈ ರೀತಿ ತೆರವು ಕಾರ್ಯಕ್ಕೆ ಮುಂದಾಗಿದೆ ಅನ್ನೋ ಮಾಹಿತಿ ಇದೆ.

ದೊಡ್ಡ ದೊಡ್ಡವರು ವ್ಯಾಪಾರದ ದೃಷ್ಟಿಯಿಂದ ನೂರಾರು ಎಕರೆ ಪ್ರದೇಶವನ್ನ ಒತ್ತುವರಿ ಮಾಡಿದ್ರೂ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗ್ತಿಲ್ಲ. ಆದ್ರೆ, ಬಡವರು ಬದುಕಲು ತಲೆತಲಾಂತರಗಳಿಂದ ಅರ್ಧ, ಒಂದು ಎಕರೆ ಜಾಗವನನ್ನು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಆದರೂ ಈ ರೀತಿ ಅನ್ಯಾಯ ಮಾಡಿದ್ದಾರೆ ಎಂಬ ಆರೋಪಗಳನ್ನು ಗ್ರಾಮಸ್ಥರು ಮಾಡುತ್ತಿದ್ದಾರೆ.

ಇದನ್ನೂ ಓದಿ:ಗಂಗಾವತಿ : ದಲಿತ ಮಹಿಳೆಯ ಮೇಲೆ ಭೂ ಮಾಲೀಕನಿಂದ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ

ಒಕ್ಕಲೆಬ್ಬಿಸುವ ವೇಳೆಯಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಅನ್ನೋ ಕಾನೂನಿದೆ. ಆದ್ರೆ, ಅರಣ್ಯ ಇಲಾಖೆಯವರು ಅವೈಜ್ಞಾನಿಕ ಸಮೀಕ್ಷೆ ನಡೆಸಿದ್ದು, ಸೂಕ್ತ ಪರಿಹಾರ ನೀಡದೇ ತರಾತುರಿಯಲ್ಲಿ ನಮ್ಮನ್ನ ಒಕ್ಕಲೆಬ್ಬಿಸಲು ಸಂಚು ರೂಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ABOUT THE AUTHOR

...view details