ಮೂಡಿಗೆರೆ(ಚಿಕ್ಕಮಗಳೂರು):ವಾರ್ಷಿಕ 150-200 ಇಂಚು ದಾಖಲೆ ಮಳೆ ಬೀಳುವ ಪ್ರದೇಶದಲ್ಲಿ, ಹವಾಮಾನ ವೈಪರಿತ್ಯದ ಮಧ್ಯೆಯೂ ಸಮೃದ್ಧ ಅಡಿಕೆ ಬೆಳೆದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ರೈತ ಅಸ್ಗರ್ ಅಹಮ್ಮದ್ ಸೈ ಎನ್ನಿಸಿಕೊಂಡಿದ್ದಾರೆ.
ಇವರಿಗೆ ಸುಮಾರು 60 ಎಕರೆ ಜಮೀನು ಇದ್ದು, ಅದರಲ್ಲಿ 12 ಎಕೆರೆಯಲ್ಲಿ ಅಡಿಕೆ ಬೆಳೆದಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಖಾಲಿ ಜಮೀನು ಖರೀದಿಸಿ ಕೃಷಿ ಚಟುವಟಿಕೆ ಆರಂಭಿಸಿದ್ದ ಅಸ್ಗರ್ ಅವರು ಮಳೆ ಪ್ರದೇಶದಲ್ಲಿ ದಾಖಲೆ ಬೆಳೆ ಬೆಳೆದು ರೈತ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಒಂದೊಂದು ಅಡಿಕೆ ಮರದಲ್ಲಿ 40 ರಿಂದ 50ಕೆಜಿವರೆಗೂ ಅಡಿಕೆ ಬರುತ್ತೆ ಅಂತಾರೆ ಅಸ್ಗರ್.
ವಾರ್ಷಿಕ 150-200 ಇಂಚು ಮಳೆ ಬೀಳುವ ಪ್ರದೇಶಗಳ ಭೂಮಿ ಶೀತವಾಗಿದ್ದು(ತಂಪಿನ ವಾತಾವರಣ), ಇಂತಹ ಪ್ರದೇಶದಲ್ಲೇ ನಾನಾ ತಳಿಯ ಅಡಿಕೆ ಬೆಳೆದಿದ್ದಾರೆ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಾಳದ ತೀರ್ಥಹಳ್ಳಿ, ಕೊಪ್ಪ, ಕಳಸ ಭಾಗದಲ್ಲಿ ಬೆಳೆಯುವಂತಹ ಎಲ್ಲಾ ಮಾದರಿಯ ಅಡಿಕೆಯನ್ನು ಅವರು ಇಲ್ಲಿ ಬೆಳೆದಿದ್ದಾರೆ.