ಚಿಕ್ಕಮಗಳೂರು: ಎನ್.ಆರ್. ಪುರ ತಹಶೀಲ್ದಾರ್ ಗೀತಾಗೆ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ನೋಟಿಸ್ ನೀಡಿದ್ದಾರೆ. ವಿವಾಹಿತನೊಂದಿಗೆ ರಿಜಿಸ್ಟರ್ ಮ್ಯಾರೇಜ್ ಆದ ಹಿನ್ನೆಲೆ, ಈ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಗ್ರಾಮ ಲೆಕ್ಕಿಗ ಶ್ರೀನಿಧಿ ಎಂಬುವರೊಂದಿಗೆ ತಹಶೀಲ್ದಾರ್ ಗೀತಾ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಈ ಸಂಬಂಧ ಶ್ರೀನಿಧಿ ಪತ್ನಿಯಿಂದ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಈಗಾಗಲೇ ಗೀತಾ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. ಆದರೆ ಮೊದಲ ಪತ್ನಿಯಿಂದ ಗ್ರಾಮ ಲೆಕ್ಕಿಗ ಶ್ರೀನಿಧಿ ವಿಚ್ಛೇದನವನ್ನು ಪಡೆದಿಲ್ಲ.