ಕರ್ನಾಟಕ

karnataka

ETV Bharat / state

ಸದ್ಯಕ್ಕಿಲ್ಲ ಚಾರ್ಮಾಡಿ ಘಾಟ್ ರಸ್ತೆ ಸಂಚಾರ - ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧರ್ಮಸ್ಥಳ ಸಂಪರ್ಕ ಕಡಿತ

ಮಹಾಮಳೆಯ ಹೊಡೆತಕ್ಕೆ ಚಾರ್ಮಾಡಿ ಘಾಟ್ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಅಲ್ಲಿಲ್ಲ ರಸ್ತೆ ಮಳೆಗೆ ಕೊಚ್ಚಿ ಹೋಗಿದೆ.

ಚಾರ್ಮಾಡಿ ಘಾಟ್ ಬಂದ್

By

Published : Aug 15, 2019, 10:52 AM IST

ಚಿಕ್ಕಮಗಳೂರು: ಸತತ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ಬಳಿ ಗುಡ್ಡ ಕುಸಿತದ ಪ್ರಕರಣಗಳು ಜಾಸ್ತಿ ಆಗಿದೆ. ಚಾರ್ಮಾಡಿ ಘಾಟಿನಲ್ಲಿ ಮೂರು ನಾಲ್ಕು ಭಾಗದಲ್ಲಿ ರಸ್ತೆ ಕುಸಿತ ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಸದ್ಯಕ್ಕಿಲ್ಲ ಚಾರ್ಮಾಡಿ ಘಾಟ್ ರಸ್ತೆ ಸಂಚಾರ

ಮಹಾಮಳೆಯ ಹೊಡೆತಕ್ಕೆ ಚಾರ್ಮಾಡಿ ಘಾಟ್ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಅಲ್ಲಿಲ್ಲ ರಸ್ತೆ ಮಳೆಗೆ ಕೊಚ್ಚಿ ಹೋಗಿದೆ.ಇದರಿಂದ ಸಂಚಾರಕ್ಕೆ ಮುಕ್ತವಾಗಲು ಇನ್ನು ಒಂದು ತಿಂಗಳು ಬೇಕು ಎಂದು ಹಾಸನದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯಾಧಿಕಾರಿ ಅರ್ಚನಾ ಹೇಳಿದ್ದಾರೆ.

ಸದ್ಯಕ್ಕೆ ಚಾರ್ಮಾಡಿ ಘಾಟ್​ನಲ್ಲಿ ಎಂಟಕ್ಕೂ ಹೆಚ್ಚು ಜೆಸಿಬಿಗಳಿಂದ ತೆರವು ಕಾರ್ಯಾಚರಣೆ ನಡೆಯತ್ತಿದೆ. ಇದರಿಂದ ರಸ್ತೆ ಸಂಚಾರ ಬಂದ್ ಆಗಿದ್ದು, ಸದ್ಯಕ್ಕೆ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧರ್ಮಸ್ಥಳ ಸಂಪರ್ಕ ಕಡಿತವಾಗಿದೆ.

ABOUT THE AUTHOR

...view details