ಕರ್ನಾಟಕ

karnataka

ETV Bharat / state

ಜಿಲ್ಲಾಧಿಕಾರಿಗಳ ನೂತನ ಕಚೇರಿ ನಿರ್ಮಾಣಕ್ಕೆ ಸ್ಥಳ ಬದಲಾವಣೆ.. ಸಚಿವ ಸಿಟಿ ರವಿ

ಈಗಿನ ಜಿಲ್ಲಾಧಿಕಾರಿಗಳ ಕಚೇರಿಗೆ ನೂರಾರು ವರ್ಷಗಳ ಹಾಗೂ ಮಹಾತ್ಮ ಗಾಂಧೀಜಿ ಬಂದು ಹೋಗಿರುವ ಇತಿಹಾಸ ಇರುವುದರಿಂದಾಗಿ ಇಲ್ಲಿ ಚಿಕ್ಕಮಗಳೂರು ಭಾವೈಕ್ಯತೆ ಸಾರುವಂತಹ ಜಿಲ್ಲಾ ಮ್ಯೂಸಿಯಂ ತೆರೆಯಲು ಯೋಚಿಸಲಾಗುವುದು..

CT Ravi
CT Ravi

By

Published : Jul 3, 2020, 6:31 PM IST

ಚಿಕ್ಕಮಗಳೂರು :ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ಸಂಕೀರ್ಣವನ್ನು ನಿರ್ಮಿಸಲು ಈಗ ಗುರುತಿಸಲಾಗಿರುವ ಜಾಗಕ್ಕೆ ಬದಲಾಗಿ ನಗರದ ತೋಟಗಾರಿಕಾ ಇಲಾಖೆ ಜಾಗದಲ್ಲಿ ನಿರ್ಮಿಸಲು ಜನಪ್ರತಿನಿಧಿಗಳು ನೀಡಿರುವ ಅಭಿಪ್ರಾಯ ಕ್ರೋಢೀಕರಿಸಿ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಟ್ಟಡ ಸಂಕೀರ್ಣನಿರ್ಮಾಣ ಮಾಡುವ ಚರ್ಚೆಯ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದ ಹೊರ ವಲಯವಾದ ಕುರುವಂಗಿ ಹಾಗೂ ಹಿರೇಮಗಳೂರು ವ್ಯಾಪ್ತಿಗೆ ಒಳಪಡುವ 60 ಎಕರೆ ಜಾಗದಲ್ಲಿ ಜಿಲ್ಲಾಧಿಕಾರಿಗಳ ನೂತನ ಕಚೇರಿಯನ್ನು ನಿರ್ಮಿಸಲು ಈ ಹಿಂದೆ ಸ್ಥಳ ಗುರುತಿಸಿ ಶಂಕು ಸ್ಥಾಪನೆ ಮಾಡಲಾಗಿತ್ತು. ಆದರೆ, ಕೆಲ ಕಾರಣಗಳಿಂದ ಆ ಜಾಗವನ್ನು ಬದಲಾಯಿಸಿ ನಗರದ ದಂಟರಮಕ್ಕಿ ಕೆರೆ ಹತ್ತಿರದ ತೋಟಗಾರಿಕಾ ಇಲಾಖೆ ಜಾಗದಲ್ಲಿ ನಿರ್ಮಿಸಲು ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.

ಈಗಾಗಲೇ ಕಚೇರಿ ನಿರ್ಮಾಣಕ್ಕಾಗಿ ಮೂರೂವರೆ ಕೋಟಿ ರೂ. ವೆಚ್ಚದ ಕಾಮಗಾರಿಯಾಗಿದೆ. ಈ ಕಟ್ಟಡದಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಅವಕಾಶ ಮಾಡಿಕೊಡಲಾಗುವುದು. ಇದರ ಜೊತೆಗೆ ವಿವಿಧ ಉತ್ತಮ ಚಟುವಟಿಕೆಗಳಿಗೂ ಬಳಸಲಾಗುವುದು.

ದಂಟರಮಕ್ಕಿ ಕೆರೆಯ ಸಮೀಪದ ತೋಟಗಾರಿಕಾ ಇಲಾಖೆಗೆ ಸೇರಿದ 11 ಎಕರೆ ಜಾಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಕಟ್ಟಡ ಸಂಕೀರ್ಣ ಸ್ಥಾಪಿಸುವ ಕುರಿತಾಗಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕಂದಾಯ ಇಲಾಖೆ ಸಚಿವರಾದ ಆರ್. ಅಶೋಕ್ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು. ಮುಂದಿನ ಹಂತವಾಗಿ ಕೃಷಿ,ತೋಟಗಾರಿಕಾ ಹಾಗೂ ಕಂದಾಯ ಸಚಿವರೊಂದಿಗೆ ಸಮಾಲೋಚನೆಯನ್ನು ನಡೆಸಿ ಅಂತಿಮ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು.

ಈಗಿನ ಜಿಲ್ಲಾಧಿಕಾರಿಗಳ ಕಚೇರಿಗೆ ನೂರಾರು ವರ್ಷಗಳ ಹಾಗೂ ಮಹಾತ್ಮ ಗಾಂಧೀಜಿ ಬಂದು ಹೋಗಿರುವ ಇತಿಹಾಸ ಇರುವುದರಿಂದಾಗಿ ಇಲ್ಲಿ ಚಿಕ್ಕಮಗಳೂರು ಭಾವೈಕ್ಯತೆ ಸಾರುವಂತಹ ಜಿಲ್ಲಾ ಮ್ಯೂಸಿಯಂ ತೆರೆಯಲು ಯೋಚಿಸಲಾಗುವುದು. ಹಾಗೂ ಈ ಕಟ್ಟಡವನ್ನು ಇನ್ನೂ ಸಾಕಷ್ಟು ವರ್ಷಗಳ ಕಾಲ ಉಳಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details