ಕರ್ನಾಟಕ

karnataka

ETV Bharat / state

ಚಂದ್ರಗ್ರಹಣ: ದೇವಾಲಯಗಳ ಪೂಜಾ ಪ್ರಸಾದದ ವ್ಯವಸ್ಥೆಯಲ್ಲಿ ಬದಲಾವಣೆ - ಶೃಂಗೇರಿ ಶಾರದಾಂಬೆ ದೇವಾಲಯ

ಚಂದ್ರಗ್ರಹಣ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ದೇವಾಲಯಗಳ ಪೂಜಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

Change in Puja Prasad System of Chikkamagaluru Temples
ಚಂದ್ರಗ್ರಹಣ ಹಿನ್ನೆಲೆ ಕ್ಕಮಗಳೂರು ದೇವಾಲಯಗಳ ಪೂಜಾ ಪ್ರಸಾದದ ವ್ಯವಸ್ಥೆಯಲ್ಲಿ ಬದಲಾವಣೆ

By

Published : Nov 8, 2022, 1:19 PM IST

Updated : Nov 8, 2022, 2:59 PM IST

ಚಿಕ್ಕಮಗಳೂರು: ಚಂದ್ರಗ್ರಹಣದ ಹಿನ್ನೆಲೆ ಇಂದು ಸಂಜೆ ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಲಿವೆ. ಪ್ರಮುಖವಾಗಿ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಬೆಳಗ್ಗೆ 11 ರಿಂದ 12 ಗಂಟೆ ತನಕ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 1.30 ಕ್ಕೆ ಅನ್ನಪೂರ್ಣೇಶ್ವರಿಗೆ ಮಹಾಮಂಗಳಾರತಿ ನಡೆಯುತ್ತಿದೆ. ಸಂಜೆ 4 ಗಂಟೆವರೆಗೆ ಅರ್ಚನೆ ನಡೆಯಲಿದೆ.

ಚಂದ್ರಗ್ರಹಣ: ದೇವಾಲಯಗಳ ಪೂಜಾ ಪ್ರಸಾದದ ವ್ಯವಸ್ಥೆಯಲ್ಲಿ ಬದಲಾವಣೆ

ಗ್ರಹಣ ಮೋಕ್ಷ ಕಾಲದ ಬಳಿಕ ಶುದ್ಧಿ ಕಾರ್ಯದ ನಂತರವೇ ಪೂಜೆ-ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಗ್ರಹಣ ಆರಂಭದಿಂದ ಅಂತ್ಯದವರೆಗೂ ಅನ್ನಪೂರ್ಣೇಶ್ವರಿಗೆ ನಿರಂತರ ಅಭಿಷೇಕ ಜರುಗಲಿದೆ. ಶೃಂಗೇರಿ ಶಾರದಾಂಬೆ ದೇವಾಲಯದಲ್ಲಿ ಎಂದಿನಂತೆ ಪೂಜೆ ನೆರವೇರಲಿದೆ.

ಗ್ರಹಣದ ವೇಳೆಯೂ ದರ್ಶನಕ್ಕೆ ಅವಕಾಶವಿದೆ. ಆದರೆ ಮಧ್ಯಾಹ್ನದ ಅನ್ನಪ್ರಸಾದ ಸೇರಿದಂತೆ ಯಾವುದೇ ಪ್ರಸಾದದ ವ್ಯವಸ್ಥೆ ಇರುವುದಿಲ್ಲ. ಗ್ರಹಣದ ಬಳಿಕ ಪೂಜೆ-ಪ್ರಸಾದ ಎಂದಿನಂತೆ ನಡೆಯಲಿದೆ. ಚಿಕ್ಕಮಗಳೂರಲ್ಲಿರುವ ದೇವಾಲಯಗಳಲ್ಲಿ ಇದೇ ರೀತಿ ಪೂಜಾ ವ್ಯವಸ್ಥೆ ನಡೆಯಲಿದೆ.

ಇದನ್ನೂ ಓದಿ:ಇಂದು ಚಂದ್ರಗ್ರಹಣ, ಬಹುತೇಕ ದೇಗುಲಗಳು ಬಂದ್​: ಭರಣಿ ನಕ್ಷತ್ರ, ಮೇಷ ರಾಶಿಯವರಿಗೆ ತೊಂದರೆ

Last Updated : Nov 8, 2022, 2:59 PM IST

ABOUT THE AUTHOR

...view details