ಕರ್ನಾಟಕ

karnataka

ETV Bharat / state

ಶಾರದೆಯ ಸನ್ನಿಧಿಯಲ್ಲಿ ಚಂಡಿಕಾ ಯಾಗ : ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮೀಜಿಗಳು ಭಾಗಿ - ಆದಿಶಕ್ತಿ ಶಾರದೆಯ ಸನ್ನಿಧಿಯಲ್ಲಿ ಚಂಡಿಕಾ ಯಾಗ...ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮೀಜಿಗಳು ಭಾಗಿ

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಕುಟುಂಬ ನಿನ್ನೆ ಮಧ್ಯಾಹ್ನ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿದ್ದು, ಇಂದು ಮುಂಜಾನೆ ಶೃಂಗೇರಿ ಶಾರದಾ ಪೀಠದಲ್ಲಿ ಸಹಸ್ರ ಚಂಡಿಕಾ ಯಾಗ ಸಂಕಲ್ಪವನ್ನು ಮಾಡಿದ್ದಾರೆ.

chandika yaga in the presence of adi shakti sharada temple
ಆದಿಶಕ್ತಿ ಶಾರದೆಯ ಸನ್ನಿಧಿಯಲ್ಲಿ ಚಂಡಿಕಾ ಯಾಗ...ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮೀಜಿಗಳು ಭಾಗಿ..

By

Published : Jan 17, 2020, 1:34 PM IST

ಚಿಕ್ಕಮಗಳೂರು : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಕುಟುಂಬ ನಿನ್ನೆ ಮಧ್ಯಾಹ್ನ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿದ್ದು, ಇಂದು ಮುಂಜಾನೆ ಶೃಂಗೇರಿ ಶಾರದಾ ಪೀಠದಲ್ಲಿ ಸಹಸ್ರ ಚಂಡಿಕಾಯಾಗ ಸಂಕಲ್ಪವನ್ನು ಮಾಡಿದ್ದಾರೆ.

ಆದಿಶಕ್ತಿ ಶಾರದೆಯ ಸನ್ನಿಧಿಯಲ್ಲಿ ಚಂಡಿಕಾ ಯಾಗ ನಡೆಯುತ್ತಿದ್ದು, ಶಾರದಾಂಬೆ ದೇವಾಲಯದ ಯಾಗ ಮಂಟಪದಲ್ಲಿ ಈ ಕಾರ್ಯ ನೆರವೇರುತ್ತಿದೆ. ಇಂದಿನಿಂದ ಐದು ದಿನಗಳ ಕಾಲ ಯಾಗ ನಡೆಯಲಿದ್ದು, ನೂರಾರು ಪುರೋಹಿತರು ಪಾಲ್ಗೊಳ್ಳಲಿದ್ದಾರೆ. ಐದು ದಿನಗಳ ಕಾಲ ಮಠದ ಆವರಣದಲ್ಲಿಯೇ ವಾಸ್ತವ್ಯ ಇರಲಿರುವ ಮಾಜಿ ಪ್ರಧಾನಿಗಳು ಮಂಗಳವಾರ ಪೂರ್ಣಾಹುತಿಯನ್ನು ಮುಗಿಸಿ ವಾಪಸ್ ತೆರಳಲಿದ್ದಾರೆ.

ಆದಿಶಕ್ತಿ ಶಾರದೆಯ ಸನ್ನಿಧಿಯಲ್ಲಿ ಚಂಡಿಕಾ ಯಾಗ...ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮೀಜಿಗಳು ಭಾಗಿ...

ದೇವೇಗೌಡರು ಮಾಡುತ್ತಿರುವ ಯಾಗದಲ್ಲಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮೀಜಿಗಳು ಭಾಗವಹಿಸಿದ್ದು, ಸುಮಾರು ಹದಿನೈದು ನಿಮಿಷಕ್ಕೂ ಅಧಿಕ ಕಾಲ ಸಂಕಲ್ಪದಲ್ಲಿ ಪಾಲ್ಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ದೇವೇಗೌಡ ಹಾಗೂ ಚನ್ನಮ್ಮ ಜಗದ್ಗುರುಗಳ ಆಶೀರ್ವಾದವನ್ನು ಪಡೆದಿದ್ದು, ಕಿರಿಯ ಶ್ರೀಗಳಾದ ವಿಧುಶೇಖರ ಭಾರತಿ ತೀರ್ಥ ಸ್ವಾಮೀಜಿ ಅವರು ಯಾಗ ಜಾಗಕ್ಕೆ ಆಗಮಿಸಿ ಅವರು ಕೂಡ ಈ ಯಾಗದಲ್ಲಿ ಭಾಗವಹಿಸಿದ್ದಾರೆ.

For All Latest Updates

ABOUT THE AUTHOR

...view details