ಕರ್ನಾಟಕ

karnataka

ETV Bharat / state

ಶೃಂಗೇರಿಯಲ್ಲಿ 5ನೇ ದಿನಕ್ಕೆ ಕಾಲಿಟ್ಟ ಚಂಡಿಕಾ ಯಾಗ: ಶಾರದಾಂಬೆ ಸನ್ನಿಧಾನಕ್ಕೆ ಹೆಚ್​ಡಿಡಿ ಕುಟುಂಬ - Kumaraswamy

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬ ಹಮ್ಮಿಕೊಂಡಿರುವ ಸಹಸ್ರ ಚಂಡಿಯಾಗ ಕಾರ್ಯಕ್ರಮದ ಕೊನೆಯ ದಿನವಾದ ಇಂದು ಯಾಗದ ಪೂರ್ಣಾಹುತಿಯಲ್ಲಿ ಹೆಚ್​.ಡಿ ದೇವೇಗೌಡ ಕುಟುಂಬದ ಎಲ್ಲಾ ಸದಸ್ಯರು ಭಾಗವಹಿಸಲಿದ್ದಾರೆ.

Sharadambe
ಶೃಂಗೇರಿ

By

Published : Jan 21, 2020, 12:12 PM IST

ಚಿಕ್ಕಮಗಳೂರು:ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶಾರದಾ ಪೀಠದಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ಕುಟುಂಬ ಹಮ್ಮಿಕೊಂಡಿರುವ ಚಂಡಿಕಾ ಯಾಗ ಐದನೇ ದಿನಕ್ಕೆ ಕಾಲಿಟ್ಟಿದೆ.

ಶೃಂಗೇರಿ ಶಾರದಾಂಬೆ ಸನ್ನಿಧಾನ

ಇಂದು ಐದನೇ ದಿನದ ಚಂಡಿಕಾ ಯಾಗ ಶೃಂಗೇರಿಯ ಶಾರದಾ ಪೀಠದ ಆವರಣದ ಯಾಗ ಶಾಲೆಯಲ್ಲಿ ನಡೆಯುತ್ತಿದ್ದು ಇಂದು ನಡೆಯುವ ಯಾಗದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಕೂಡ ಭಾಗವಹಿಸಲಿದ್ದಾರೆ.

ಈಗಾಗಲೇ ಹೆಚ್​.ಡಿ ರೇವಣ್ಣ ಹಾಗೂ ಅನಿತಾ ಕುಮಾರಸ್ವಾಮಿ ಶೃಂಗೇರಿ ಪೀಠಕ್ಕೆ ಆಗಮಿಸಿದ್ದಾರೆ. ಈಗಾಗಲೇ ನೂರಾರು ಪುರೋಹಿತರು ಯಾಗ ಶಾಲೆಗೆ ಆಗಮಿಸಿದ್ದು ಐದನೇ ದಿನದ ಯಾಗದ ಸರ್ವ ಸಿದ್ಧತೆ ಮಾಡಿ ಕೊಳ್ಳಲಾಗುತ್ತಿದೆ. ಈಗಾಗಲೇ ಯಾಗ ಶಾಲೆಗೆ ಆಗಮಿಸಿರುವ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಶಾರದಾಂಬ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.

ಇಂದು ಯಾಗದ ಪೂರ್ಣಾಹುತಿ ನಡೆಯಲಿದ್ದು ಹೆಚ್​.ಡಿ ದೇವೇಗೌಡ ಕುಟುಂಬದ ಎಲ್ಲಾ ಸದಸ್ಯರು ಭಾಗವಹಿಸಲಿದ್ದಾರೆ. ಚಂಡಿಕಾಯಾಗದ ಪೂರ್ಣಾವಧಿ ಕಾರ್ಯಕ್ರಮ ಮುಗಿಸಿಕೊಂಡು ಮಂಗಳೂರಿನ ಕಡೆ ಹೆಚ್​ಡಿಕೆ ಪ್ರಯಾಣ ಬೆಳೆಸಲಿದ್ದಾರೆ.

ABOUT THE AUTHOR

...view details