ಚಿಕ್ಕಮಗಳೂರು:ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಾನದಲ್ಲಿ ಲೋಕಕಲ್ಯಾಣಕ್ಕಾಗಿ ಶುಕ್ರವಾರ ವಿಶೇಷ ಚಂಡಿಕಾ ಹೋಮ ನಡೆಯಿತು. ನವರಾತ್ರಿಯ ಪ್ರತಿದಿನವೂ ಅನ್ನಪೂರ್ಣೇಶ್ವರಿಗೆ ವಿವಿಧ ಅಲಂಕಾರಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥ ಚಂಡಿಕಾ ಹೋಮ, ನವರಾತ್ರಿ ಉತ್ಸವ ಸಂಪನ್ನ - ಹೊರನಾಡು ಅನ್ನಪೂರ್ಣೇಶ್ವರಿ ಶ್ರೀ ಕ್ಷೇತ್ರ
ಕಳಸಾ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ವಿಶೇಷ ಚಂಡಿಕಾ ಹೋಮ ಜರುಗಿತು.
ಹೊರನಾಡು ಅನ್ನಪೂರ್ಣೇಶ್ವರಿ ಶ್ರೀ ಕ್ಷೇತ್ರದಲ್ಲಿ ಇಂದು ವಿಶೇಷ ಚಂಡಿಕಾ ಹೋಮ ಜರುಗಿತು
Published : Oct 27, 2023, 10:42 PM IST
|Updated : Oct 27, 2023, 10:59 PM IST
ಕೊನೆಯ ದ್ವಾದಶಿ ದಿನದಂದು ಲೋಕಕಲ್ಯಾಣಾರ್ಥ ಚಂಡಿಕಾ ಹೋಮ ನೆರವೇರಿತು. ಮಹಾಚಂಡಿಕಾ ಹೋಮ ಕೈಗೊಳ್ಳುವುದರಿಂದ ಜಗತ್ತಿನೆಲ್ಲೆಡೆ ಸಮೃದ್ದಿ, ಶಾಂತಿ ನೆಲೆಸಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೋಮದಲ್ಲಿ ಧರ್ಮದರ್ಶಿ ಕುಟುಂಬ ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಇದನ್ನೂಓದಿ:ವಿಜಯಪುರ ಜಿಲ್ಲೆಗೆ ಬಸವಣ್ಣನವರ ಹೆಸರಿಡುವ ವಿಚಾರ.. 15 ದಿನದೊಳಗೆ ಅಭಿಪ್ರಾಯ ಸಲ್ಲಿಕೆಗೆ ಜಿಲ್ಲಾಡಳಿತದ ಗಡುವು
Last Updated : Oct 27, 2023, 10:59 PM IST