ಕರ್ನಾಟಕ

karnataka

ETV Bharat / state

ಕೊರೊನಾ ವೈರಸ್ ನಿಭಾಯಿಸಲು ಕೇಂದ್ರ ಸರ್ಕಾರ ಸಿದ್ಧವಿದೆ: ಶೋಭಾ ಕರಂದ್ಲಾಜೆ - ಕೊರೊನಾ ವೈರಸ್ ಕುರಿತು ಶೋಭಾ ಕರಂದ್ಲಾಜೆ ಮಾತು

ಕೊರೊನಾ ವೈರಸ್​ ಹಿನ್ನೆಲೆ ಚೀನಾದಿಂದ ಭಾರತಕ್ಕೆ ಬಂದವರನ್ನು ಸುರಕ್ಷಿತವಾಗಿಡಲು ಎಲ್ಲಾ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Shobha Karandlaje
ಶೋಭಾ ಕರಂದ್ಲಾಜೆ

By

Published : Feb 8, 2020, 4:44 PM IST

ಚಿಕ್ಕಮಗಳೂರು: ಕೊರೊನಾ ವೈರಸ್​ ಹಿನ್ನೆಲೆಯಲ್ಲಿ ಚೀನಾದಿಂದ ಭಾರತಕ್ಕೆ ಬಂದವರನ್ನು ಸುರಕ್ಷಿತವಾಗಿಡಲು ಎಲ್ಲಾ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಕೊರೊನಾ ವೈರಸ್ ಕುರಿತು ಮಾತನಾಡಿದ ಶೋಭಾ ಕರಂದ್ಲಾಜೆ

ಕೊರೊನಾ ವೈರಸ್ ಕುರಿತು ಮಾತನಾಡಿದ ಅವರು, ಭಾರತವು ಚೀನಾಕ್ಕೆ ರಫ್ತು ಮಾಡುತ್ತಿದ್ದ ಮಾಸ್ಕ್ ಹಾಗೂ ಇತರೆ ವಸ್ತುಗಳನ್ನು ಈಗಾಗಲೇ ನಿಷೇಧಿಸಿದೆ. ಕೊರೊನಾ ವೈರಸ್​ ಭಾರತಕ್ಕೆ ಬರೋದಿಲ್ಲ, ಬಂದರೆ ಅದನ್ನು ನಿಭಾಯಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸನ್ನದ್ಧವಾಗಿದೆ. ಯಾರಿಗಾದ್ರೂ ವೈರಸ್​ ಇರುವ ಲಕ್ಷಣಗಳು ಕಂಡುಬಂದರೆ ಅವರ ರಕ್ತ ಪರೀಕ್ಷೆ ಮಾಡಿಸಿ, ಮೆಡಿಕಲ್‌ ರಿಪೋರ್ಟ್ ಬರುವ ತನಕ ಅಂಥವರನ್ನು ಸುರಕ್ಷಿತವಾಗಿ ನೋಡಿಕೊಳ್ಳಲಾಗುತ್ತದೆ ಎಂದರು.

ಕಾರವಾರದ ಯುವಕ ಚೀನಾದಲ್ಲಿ ಸಿಲುಕಿರುವ ಕುರಿತು ಮಾತನಾಡಿ, ಆ ಯುವಕ ದೇಶಕ್ಕೆ ಅತನ ಬಗ್ಗೆ ನಿಗಾ ಇಟ್ಟು ಔಷಧಿ ನೀಡಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ, ಸ್ಥಳೀಯ ಜಿಲ್ಲಾಡಳಿತ ಸಿದ್ದವಿದೆ. ಚೀನಾದಲ್ಲಿರುವ ಎಲ್ಲಾ ಭಾರತೀಯರನ್ನು ಕೇಂದ್ರ ಸರ್ಕಾರ ಸ್ವದೇಶಕ್ಕೆ ಕರೆಯಿಸಿಕೊಳ್ಳುತ್ತಿದೆ. ಈಗಾಗಲೇ 650 ಜನರನ್ನು ಕರೆಸಿಕೊಳ್ಳಲಾಗಿದೆ. ಇನ್ನು ಯಾರಾದ್ರೂ ಇದ್ದರೆ ಕೇಂದ್ರ ಸರ್ಕಾರ ಕರೆಸಿಕೊಳ್ಳಲು ಸಿದ್ಧವಿದೆ ಎಂದು ತಿಳಿಸಿದರು.

ಕೇರಳದಿಂದ ಚಿಕ್ಕಮಗಳೂರು ಜಿಲ್ಲೆಗೆ ಬರುವ ಪ್ರವಾಸಿಗರ ಕುರಿತು ಮಾತನಾಡಿ, ಯಾರು ಬರುತ್ತಾರೆ? ಯಾವಾಗ ಬರುತ್ತಾರೆ? ಇದರ ಹಿನ್ನೆಲೆ ಏನು ಎಂಬುದನ್ನು ತಿಳಿದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ABOUT THE AUTHOR

...view details