ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯ ಹೊರವಲಯದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಜಾನುವಾರುಗಳು ಪ್ಲಾಸ್ಟಿಕ್ ಹಾಗೂ ಪೇಪರ್ ವಸ್ತುಗಳನ್ನು ತಿಂದು ಸಾವನ್ನಪ್ಪುತ್ತಿವೆ ಎಂದು ಲಿಂಗದಹಳ್ಳಿ ಬಜರಂಗದಳದ ಕಾರ್ಯಕರ್ತರು ಆರೋಸಿದ್ದಾರೆ.
ಲಿಂಗದಹಳ್ಳಿಯ ಹೊರವಲಯದ ಹತ್ತಾರು ಎಕರೆ ವಿಶಾಲ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಲಾಗಿದ್ದು, ಈ ಘಟದಕಲ್ಲಿ ಎಲ್ಲ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ. ಸುತ್ತ ಮುತ್ತಲ ಪ್ರದೇಶದ ಜಾನುವಾರುಗಳು ಇಲ್ಲಿನ ಪ್ಲಾಸ್ಟಿಕ್ ಹಾಗೂ ಇತರ ಹಾನಿಕಾರಕ ವಸ್ತುಗಳನ್ನು ತಿನ್ನುವ ಮೂಲಕ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದು, ಈಗಾಗಲೇ ಹಲವಾರು ಜಾನುವಾರುಗಳು ಹಾಗೂ ಶ್ವಾನಗಳು ಮೃತಪಟ್ಟಿವೆ ಎಂದು ಬಜರಂಗದಳ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.