ಚಿಕ್ಕಮಗಳೂರು:ಇಳಿ ವಯಸ್ಸಿನಲ್ಲಿ ವೃದ್ಧೆಯೋರ್ವರು ಜೀವನೋಪಾಯಕ್ಕಾಗಿ 10ಕ್ಕೂ ಹೆಚ್ಚು ಜಾ ಸಾಕಿ ಜೀವನ ನಡೆಸುತ್ತಿದ್ದರು. ಆದರೆ ಜಾನುವಾರು ಕಳ್ಳರಿಂದ ಅವರ ಬದುಕು ಅತಂತ್ರವಾಗಿದೆ.
ನಗರದ ಗೌರಿಕಾಲುವೆ ನಿವಾಸಿಯಾದ ಲಕ್ಷ್ಮೀದೇವಿಯವರು ಸುಮಾರು 10 ಕ್ಕೂ ಅಧಿಕ ಹಸುಗಳನ್ನು ಸಾಕಿದ್ದರು. ಅವುಗಳ ಹಾಲನ್ನು ಡೈರಿಗೆ ಹಾಕಿ ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ ಎರಡ್ಮೂರು ತಿಂಗಳಲ್ಲಿ ಗೋಕಳ್ಳರು ಸುಮಾರು ನಾಲ್ಕು ಹಸುಗಳು ಸೇರಿಂದತೆ ಕರುಗಳನ್ನು ಕಳ್ಳತನ ಮಾಡಿದ್ದಾರೆ. ದೇವರಿಗೆ ಬಿಟ್ಟಿದ್ದ ಬಸವನನ್ನೂ ಬಿಟ್ಟಿಲ್ಲ. ಈಗ ವೃದ್ಧೆಯ ಬಳಿ ಒಂದೇ ಒಂದು ಹಸು ಉಳಿದುಕೊಂಡಿದೆ.
ರಾತ್ರಿ ವೇಳೆ ಬರುವ ಖದೀಮರು, ಮನೆ ಮುಂದೆ ಮಲಗುವ ಹಸುಗಳನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಈ ಕುರಿತಾದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಹಸುಗಳ ಕಳ್ಳತನ ನಡೆದಾಗಲೆಲ್ಲ ವೃದ್ಧೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲವಂತೆ. ಪ್ರತಿ ಬಾರಿ ಅಧಿಕಾರಿಗಳು ಹುಡುಕಿ ಕೊಡುವ ಹುಸಿ ಭರವಸೆ ಮಾತ್ರ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.