ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹಳ್ಳಿ ಹಳ್ಳಿಗೂ ಕೊರೊನಾ ಸೋಂಕು ವ್ಯಾಪಿಸುತ್ತಿದ್ದರೂ ಮನೆಯಲ್ಲಿಯೇ ಇರದೇ ಹೊರಬಂದ ಕೊರೊನಾ ಸೋಂಕಿತರ ವಿರುದ್ಧ ದೂರು ದಾಖಲಾಗಿದೆ.
ಮನೆಯಲ್ಲಿರದೇ ಹೊರ ಹೋಗಿದ್ದ ಇಬ್ಬರು ಸೋಂಕಿತರ ವಿರುದ್ಧ ಪ್ರಕರಣ ದಾಖಲು - ಸೋಂಕಿತರ ವಿರುದ್ಧ ಪ್ರಕರಣ
ಕೊರೊನಾ ಪಾಸಿಟಿವ್ ಬಂದಿದ್ದರೂ ಮನೆಯಲ್ಲಿರದೇ ಹೊರಗೆ ಹೋಗಿದ್ದ ಇಬ್ಬರು ಸೋಂಕಿತರ ವಿರುದ್ಧ ಚಿಕ್ಕಮಗಳೂರಿನಲ್ಲಿ ಪ್ರಕರಣ ದಾಖಲಾಗಿದೆ.
ಸೋಂಕಿತರು ಮನೆಯಲ್ಲಿಯೇ ಇರಬೇಕು ಎಂದು ಸರ್ಕಾರ ಆದೇಶ ಮಾಡಿದ್ದರೂ ಕೆಲವರು ಈ ಆದೇಶವನ್ನು ಗಾಳಿಗೆ ತೂರಿ ಮನೆಯಿಂದ ಹೊರ ಬರುತ್ತಿದ್ದಾರೆ. ಇದು ಅಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿದೆ. ಈ ರೀತಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಇಬ್ಬರ ವಿರುದ್ಧ ಚಿಕ್ಕಮಗಳೂರಿನಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಚಿಕ್ಕಮಗಳೂರಿನ ವಸ್ತಾರೆ ಹೋಬಳಿಯ ವಿಶೇಷ ದಂಡಾಧಿಕಾರಿ ದಯಾನಂದ ಹಾಗೂ ಕಂದಾಯ ನಿರೀಕ್ಷಕರಾದ ರವಿಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ಇವರ ತಂಡ ಕೊರೊನಾ ಸೋಂಕಿತರ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ, ಇಬ್ಬರು ಸೋಂಕಿತರು ಮನೆಯಲ್ಲಿ ಇಲ್ಲದಿರುವುದು ತಿಳಿದು ಬಂದಿದೆ. ಉಳುವಾಗಿಲು ಗ್ರಾಮದ ಇಬ್ಬರು ಸೋಂಕಿತರಾ ನಿಯಮ ಉಲ್ಲಂಘನೆ ಮಾಡಿರುವ ಆನಂದ್ ಹಾಗೂ ಶಿವು ಇವರ ವಿರುದ್ಧ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಇವರಿಬ್ಬರೂ ಹೊರಹೋದ ಕಾರಣ ಕೊರೊನಾ ಸೋಂಕು ಮತ್ತೆಷ್ಟು ಜನರಿಗೆ ತಗುಲಿದೆಯೋ ಎಂಬ ಆತಂಕ ಎದುರಾಗಿದೆ.