ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: 25 ಕ್ಕೂ ಹೆಚ್ಚು ಶ್ವಾನಗಳನ್ನ ಭಕ್ಷಿಸಿದ್ದ ಚಿರತೆ ಸೆರೆ - ತರೀಕೆರೆ ತಾಲೂಕಿನ ವಿಟ್ಲಾಪುರ ಗ್ರಾಮ

ಜಿಲ್ಲೆಯ ತರೀಕೆರೆ ತಾಲೂಕಿನ ವಿಟ್ಲಾಪುರ ಗ್ರಾಮದಲ್ಲಿ ಶ್ವಾನಗಳ ಪಾಲಿನ ವಿಲನ್​​​​ ಆಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

Capture the leopard that preyed on dogs chikkamagalore
ಚಿಕ್ಕಮಗಳೂರು: 25 ಕ್ಕೂ ಹೆಚ್ಚು ಶ್ವಾನಗಳನ್ನು ಭಕ್ಷಣೆ ಮಾಡಿದ್ದ ಚಿರತೆ ಸೆರೆ

By

Published : May 28, 2020, 9:32 PM IST

ಚಿಕ್ಕಮಗಳೂರು: ಗ್ರಾಮಕ್ಕೆ ಬಂದು ಶ್ವಾನಗಳನ್ನು ಬೇಟೆಯಾಡುತ್ತಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿರುವ ಘಟನೆ ತರೀಕೆರೆಯಲ್ಲಿ ನಡೆದಿದೆ.

ಚಿಕ್ಕಮಗಳೂರು: 25 ಕ್ಕೂ ಹೆಚ್ಚು ಶ್ವಾನಗಳನ್ನು ಭಕ್ಷಣೆ ಮಾಡಿದ್ದ ಚಿರತೆ ಸೆರೆ

ರಾತ್ರಿ ವೇಳೆ ಟಾರ್ಗೆಟ್ ಮಾಡಿ ನಾಯಿಗಳನ್ನು ಭೇಟೆಯಾಡಲು ಹೊಂಚು ಹಾಕುತ್ತಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ವಿಟ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಮಾರು 25 ಕ್ಕೂ ಹೆಚ್ಚು ನಾಯಿಗಳನ್ನು ಈ ಚಿರತೆ ಭೇಟೆಯಾಡಿ ಭಕ್ಷಣೆ ಮಾಡಿತ್ತು.

ರಾತ್ರಿ ವೇಳೆ ಹೊಂಚು ಹಾಕಿ ಶ್ವಾನಗಳನ್ನು ತಿನ್ನುತ್ತಿದ್ದ ಚಿರತೆಯನ್ನು ಸೆರೆ ಹಿಡಿದಿದ್ದು, ಈ ಘಟನೆಯಿಂದ ವಿಟ್ಲಾಪುರ, ನೇರಳೆಕೆರೆ, ಅಮೃತ ಪುರದಲ್ಲಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಈ ಚಿರತೆ ಬಿದ್ದಿದ್ದು, ಸುತ್ತ ಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ABOUT THE AUTHOR

...view details