ಚಿಕ್ಕಮಗಳೂರು: ಸುಮಾರು 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಶೃಂಗೇರಿಯ ಕೊಂಡಗೇರಿ ಗ್ರಾಮದಲ್ಲಿ ನಡೆದಿದೆ.
15 ಅಡಿ ಉದ್ದದ ಕಾಳಿಂಗ ಕಂಡು ಹೌಹಾರಿದ ಮನೆ ಮಂದಿ ಕೊಂಡಗೇರಿಯ ಸುರೇಂದ್ರ ಗೌಡ ಎಂಬುವವರ ಮನೆಗೆ ಈ ಕಾಳಿಂಗ ಸರ್ಪ ಬಂದಿದೆ. ಮನೆಯ ಪಕ್ಕದಲ್ಲಿಯೇ ಜೋಡಿಸಿದ್ದ ಸೌದೆಯಲ್ಲಿ ಸರ್ಪ ಬೆಚ್ಚಗೆ ಬಂದು ಮಲಗಿದೆ. ಸೌದೆ ತೆಗೆಯಲು ಹೋದಾಗ ಈ ಕಾಳಿಂಗನನ್ನು ನೋಡಿ ಮನೆಯ ಸದಸ್ಯರು ಬೆಚ್ಚಿ ಬಿದ್ದಿದ್ದು ಸ್ಥಳದಿಂದ ಎದ್ನೋ ಬಿದ್ನೋ ಅಂತಾ ಓಡಿ ಹೋಗಿದ್ದರು.
ಕೂಡಲೇ ಶೃಂಗೇರಿಯ ಸ್ನೇಕ್ ಅರ್ಜುನ್ ಅವರಿಗೆ ಪೋನ್ ಮಾಡಿ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಅರ್ಜುನ್ ಅವರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಸೌದೆ ಒಳಗೆ ಕಾಳಿಂಗ ಸರ್ಪ ಮಲಗಿರೋದನ್ನು ಖಾತರಿ ಪಡಿಸಿಕೊಂಡಿದ್ದಾರೆ.
ನಂತರ ಸುಮಾರು 30 ನಿಮಿಷಗಳ ಕಾರ್ಯಚರಣೆ ಬಳಿಕ ಸ್ನೇಕ್ ಅರ್ಜುನ್ ಈ ಕಾಳಿಂಗ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಈ ಕಾಳಿಂಗ ಸರ್ಪ ಹಿಡಿಯುವ ಸಂದರ್ಭದಲ್ಲಿ ಈ ಕಾಳಿಂಗದ ಜೊತೆ ಸ್ನೇಕ್ ಅರ್ಜುನ್ ಆಟವಾಗಿದ್ದಾರೆ.
ಇನ್ನು ಕಾಳಿಂಗ ಸೆರೆಯಾದ ಬಳಿಕ ಮನೆಯ ಸದಸ್ಯರು ನಿಟ್ಟುಸಿರು ಬಿಟ್ಟಿದ್ದು, ನಂತರ ಶೃಂಗೇರಿ ಹೊರವಲಯದ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಸರ್ಪವನ್ನು ಬಿಟ್ಟಿದ್ದಾರೆ.