ಕರ್ನಾಟಕ

karnataka

ETV Bharat / state

ನನ್ನನ್ನು ಮುಲ್ಲಾ ಎಂದು ಕರೆಯಲು ಸಾಧ್ಯವಿಲ್ಲ.. ಹಿಂದೂ ಹುಲಿ ಅಂತಾನೇ ಕರೆಯಬೇಕು: ಶಾಸಕ ಸಿಟಿ ರವಿ - CT Ravi speak in chikkamagaluru

ನನ್ನ ಹಿಂದೂ ಹುಲಿ ಅಂತಾನೇ ಕರೆಯಬೇಕು. ನನ್ನನ್ನು ಮುಲ್ಲಾ ಎಂದು ಕರೆದರೆ, ಮುಲ್ಲಾಗಳು ಒಪ್ಪಿಕೊಳ್ಳಲ್ಲ. ಸ್ವಭಾವಕ್ಕೆ ತಕ್ಕಂತೆ ಬಿರುದುಗಳು ನಮಗೆ ಬರುತ್ತವೆ ಎಂದು ಚಿಕ್ಕಮಗಳೂರಿನಲ್ಲಿ ಸಿ ಟಿ ರವಿ ಹೇಳಿದ್ದಾರೆ.

ಬಿಜೆಪಿ ನಾಯಕ ಸಿ ಟಿ ರವಿ
ಬಿಜೆಪಿ ನಾಯಕ ಸಿ ಟಿ ರವಿ

By

Published : Dec 7, 2022, 2:38 PM IST

ಚಿಕ್ಕಮಗಳೂರು: ಬಿಜೆಪಿ ನಾಯಕರ ಹೆಸರಿಗೆ ಮುಸ್ಲಿಂ ಹೆಸರನ್ನು ಹಾಕಿ ಕಾಂಗ್ರೆಸ್​​ ಟ್ವೀಟ್ ಮಾಡುತ್ತಿರುವ ವಿಚಾರವಾಗಿ ಬಿಜೆಪಿ ನಾಯಕ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರ ಸ್ವಭಾವ ಹಾಗೆ ಇದ್ದರೆ, ಕಾಂಗ್ರೆಸ್​​ನವರು ಖಂಡಿತ ಕರೆಯಲಿ. ನನ್ನ ಸ್ವಭಾವ ಕುಂಕುಮ ಕಂಡರೆ, ಕೇಸರಿ ನೋಡಿದ್ರೆ ಆಗದಿದ್ದರೆ, ಮುಲ್ಲಾಗಳ ಮೇಲೆ ಪ್ರೀತಿ ಜಾಸ್ತಿ ಇದ್ದರೆ ಖಂಡಿತ ಹಾಗೆ ಕರೆಯಬಹುದು ಎಂದಿದ್ದಾರೆ.

ಬಿಜೆಪಿ ನಾಯಕ ಸಿ ಟಿ ರವಿ

ನನ್ನ ಮುಲ್ಲಾ ಎಂದು ಕರೆಯೋಕ್ಕಾಗಲ್ಲ, ಹಿಂದೂ ಹುಲಿ ಅಂತಾನೇ ಕರೆಯಬೇಕು. ನನ್ನ ಮುಲ್ಲಾ ಎಂದು ಕರೆದರೆ ಮುಲ್ಲಾಗಳು ಒಪ್ಪಿಕೊಳ್ಳಲ್ಲ. ಸ್ವಭಾವಕ್ಕೆ ತಕ್ಕಂತೆ ಬಿರುದುಗಳು ನಮಗೆ ಬರುತ್ತವೆ. ಪರ್ಷಿಯನ್ ಭಾಷೆಯನ್ನ ಆಡಳಿತ ಭಾಷೆಯನ್ನಾಗಿ ಮಾಡಿದವನನ್ನ ಕನ್ನಡ ಪ್ರೇಮಿ ಅಂತ ಹೇಳೋದಕ್ಕೆ ಆಗುತ್ತಾ? ಹಾಗೆ ಹೇಳಿದರೆ ಅದಕ್ಕಿಂತ ಅಪಪ್ರಚಾರ ಬೇರೆ ಏನಿದೆ.

ಮುಲ್ಲಾ ಅನ್ನೋ ಹೆಸರು ಯಾರಿಗೆ ಕನೆಕ್ಟ್ ಆಗುತ್ತೆ ಎಂದರೆ, ಶಾದಿ ಭಾಗ್ಯ, ದೇ ಆರ್ ಆಲ್ ಮೈ ಬ್ರದರ್ಸ್ ಅನ್ನೋರಿಗೆ ಕನೆಕ್ಟ್ ಆಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:ಸಿದ್ರಾಮುಲ್ಲಾ ಖಾನ್ ಎಂದಿದ್ದಕ್ಕೆ ಖುಷಿಪಡುವೆ: ಸಿದ್ದರಾಮಯ್ಯ

ಬೆಂಕಿ ಹಾಕಿದ್ರು ಕೂಡ ಅಮಾಯಕರು ಅನ್ನೋರಿಗೆ ಕನೆಕ್ಟ್ ಆಗುತ್ತದೆ. ಕೇಸರಿ, ಕುಂಕುಮವನ್ನ ದೂಡಿ ಟೋಪಿಯನ್ನ ಪ್ರೀತಿಯಿಂದ ಹಾಕಿಕೊಳ್ಳುವವರಿಗೆ ಕನೆಕ್ಟ್ ಆಗುತ್ತೆ ಎಂದು ಚಿಕ್ಕಮಗಳೂರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಹೇಳದೇ ಸಿ ಟಿ ರವಿ ಅವರನ್ನು ಕುಟುಕಿದ್ದಾರೆ.

ABOUT THE AUTHOR

...view details