ಕರ್ನಾಟಕ

karnataka

ETV Bharat / state

ಡಿಕೆಶಿ ನಟನಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದಾಗಿತ್ತು: ಸಿ ಟಿ ರವಿ - ಈಟಿವಿ ಭಾರತ್ ಕನ್ನಡ ಸುದ್ದಿ

ಡಿಕೆಶಿ ನಟನಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದಾಗಿತ್ತು. ಅವರು ತುಂಬಾ ಚೆನ್ನಾಗಿ ನಟನೆ ಮಾಡ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ತಿಳಿಸಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ

By

Published : Oct 2, 2022, 3:12 PM IST

Updated : Oct 2, 2022, 3:38 PM IST

ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಒಳಗಡೆ ಇಂತಹ ಕಲಾವಿದ ಇದ್ದಾನೆಂದು ನಾನು ಅಂದುಕೊಂಡಿರಲಿಲ್ಲ ಎಂದು ಭಾರತ್ ಜೋಡೋ ಯಾತ್ರೆಯಲ್ಲಿ ಡಿಕೆಶಿ ಕಣ್ಣೀರು ಹಾಕಿದ್ದಕ್ಕೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಮಾತನಾಡಿದರು

ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿ ನಟರಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದಾಗಿತ್ತು. ಅವರು ತುಂಬಾ ಚೆನ್ನಾಗಿ ನಟನೆ ಮಾಡ್ತಾರೆ. ಬಣ್ಣ ಹಾಕದೆ, ಗ್ಲಿಸರಿನ್ ಹಾಕದೆ ಕಣ್ಣೀರು ಸುರಿಸುವ ನಟನೆ ಅವರಿಗೆ ಒಲಿದು ಬಂದಿದೆ. ಈ ನಟನೆ ಡಿ. ಕೆ ಶಿವಕುಮಾರ್ ಅವರಿಗೆ ಬೈ ಬರ್ತ್ ಬಂದಿದೆ. ಬೈ ಮಿಸ್ಟೇಕ್ ಅವರು ರಾಜಕೀಯಕ್ಕೆ ಬಂದುಬಿಟ್ಟಿದ್ದಾರೆ ಎಂದು ಗೇಲಿ ಮಾಡಿದರು.

ಡಿ ಕೆ ಶಿವಕುಮಾರ್ ಅವರಿಗೆ ಹೀರೋ ಆಗುವ ವಯಸ್ಸು ಮುಗಿದು ಹೋಗಿದೆ. ವಿಲನ್ ಆಗೋಕೂ ತಾಕತ್ತು ಇಲ್ಲದಂತಾಗಿದೆ. ಆದರೆ, ಪ್ರಯತ್ನಪಟ್ಟರೆ ನಟನಾಗೋಕೆ ಪೋಷಕ ಪಾತ್ರಗಳು ಸಿಗುತ್ತವೆ. ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ ಕಾಂಪಿಟೇಟರ್ ಹುಟ್ಕೊಂಡಿದ್ದಾರೆ. ರಿಷಬ್ ಶೆಟ್ಟಿಗೂ ಅವಕಾಶ ಸಿಗದಂತೆ ಡಿಕೆಶಿ ಮಾಡಿದ್ದಾರೆ. ಇನ್ಮುಂದೆ ಪ್ರಶಸ್ತಿ ಏನಿದ್ರೂ ಡಿಕೆಶಿ ಪಾಲಿಗೆ. ಈ ರೀತಿಯ ಕಮೆಂಟ್​ಗಳನ್ನು ನಾನು ನೋಡಿದ್ದೇನೆ. ಲೇಟಾಗಿದೆ, ಆದ್ರೂ ಕೂಡ ಕಡೆ ಅವಕಾಶ ಸಿಕ್ಕರೂ ಸಿಗಬಹುದು. ಸಿನಿಮಾದಲ್ಲಿ ನಟಿಸಲು ಡಿ ಕೆ ಶಿವಕುಮಾರ್ ಟ್ರೈ ಮಾಡೋದು ಒಳ್ಳೆಯದು ಎಂದು ಸಲಹೆ ನೀಡಿದರು.

ಓದಿ:ಭಾರತ್ ಜೋಡೋ ಬಗ್ಗೆ ಕಾಂಗ್ರೆಸ್ ಪಶ್ಚಾತ್ತಾಪ ಪಡೆಬೇಕಿತ್ತು: ಸಚಿವ ಸುನಿಲ್ ಕುಮಾರ್

Last Updated : Oct 2, 2022, 3:38 PM IST

ABOUT THE AUTHOR

...view details