ಚಿಕ್ಕಮಗಳೂರು: ತಾಲಿಬಾನಿಗಳು ಮೊದಲು ಬ್ರೈನ್ ವಾಶ್ ಮಾಡುತ್ತಾರೆ, ಆಮೇಲೆ ಕೈಗೆ ಬಂದೂಕು ಕೊಡುತ್ತಾರೆ, ಅಫ್ಘಾನಿಸ್ತಾನದಲ್ಲೂ ಅವರು ಮಾಡಿದ್ದು ಇದೇ ಕೆಲಸ, ಈಗ ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಕೂಡ ಮಾಡುತ್ತಿರೋದು ಇದನ್ನೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಜಿಲ್ಲೆಯ ಕಡೂರಿನಲ್ಲಿ ಮಾತನಾಡಿದ ಅವರು, ಸಿಮಿ ನಿಷೇಧಕ್ಕೂ ಮೊದಲು ಅವರ ಕಾರ್ಯಾಲಯ ರೈಡ್ ಆಗಿತ್ತು. ಅವರ ಕಾರ್ಯಾಲಯದಲ್ಲಿ ಮೊಘಲ್ ಸಂಸ್ಥಾನದ ಭೂಪಟ ಹಾಗೂ ಮೊಘಲ್ ಸ್ಥಾನದ ಹೆಸರಿತ್ತು. ಅದರಲ್ಲಿ ದಕ್ಷಿಣದ ಕೆಲ ರಾಜ್ಯ ಬಿಟ್ಟು ಉತ್ತರದ ಎಲ್ಲಾ ರಾಜ್ಯಗಳನ್ನ ಸೇರಿಸಿಕೊಂಡು ಹೊಸ ರಾಷ್ಟ್ರದ ಕಲ್ಪನೆ ಮುಂದಿಟ್ಟುಕೊಂಡಿದ್ದರು ಎಂದರು.