ಚಿಕ್ಕಮಗಳೂರು: ಕ್ರಿಮಿನಲ್ ಅಫೆನ್ಸ್ ಮಾಡಿದವರನ್ನು ತನಿಖೆ ಮಾಡಬಾರದು ಅಂದ್ರೆ ಏನರ್ಥ? ಸಂವಿಧಾನದ ಪ್ರಕಾರ ನೆಹರು ಕುಟುಂಬ ಏನು ಮಾಡಿದ್ರೂ ಪ್ರಶ್ನೆ ಮಾಡುವ ಹಾಗಿಲ್ಲವೇ? ಎಂದು ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಗಾಂಧಿ ಹೆಸರಿಟ್ಟುಕೊಂಡು ಅವರ ಹೆಸರಿಗೆ ಅಪಚಾರ ಬಳಿಯುತ್ತಿದ್ದಾರೆ. ಗಾಂಧಿ ಸತ್ಯದ ಪರ ಸತ್ಯಾಗ್ರಹ ಮಾಡಿದ್ರು. ಆದ್ರೆ ಇವರು ಭ್ರಷ್ಟಾಚಾರ ಮುಚ್ಚಿ ಹಾಕಿಕೊಳ್ಳಲು ಚಳವಳಿ ಮಾಡುತ್ತಾರೆ. ಚಳವಳಿ ಮೂಲಕ ಭ್ರಷ್ಟಾಚಾರದ ತನಿಖೆ ಅಗಬಾರದೆಂದು ಬಯಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎತ್ತಿನ ಮೇಲೆ NEXT CM ಶ್ರೀರಾಮುಲು ಎಂಬ ಬರಹ NEXT CM ಶ್ರೀರಾಮುಲು: ಸಚಿವ ಶ್ರೀರಾಮುಲು ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಅವರ ಅಭಿಮಾನಿಯೊಬ್ಬ ತಮ್ಮ ಎತ್ತಿಗೆ ಬಣ್ಣ ಬಳಿದು ಸಿಂಗಾರ ಮಾಡಿ ಅದರ ಮೈಮೇಲೆ ''NEXT CM ಶ್ರೀರಾಮುಲು'' ಅಂತ ಬರೆದಿರುವ ಫೋಟೋಗಳು ವೈರಲ್ ಆಗಿದೆ. ಇಂದು ಕಾರಹುಣ್ಣಿಮೆ. ಗ್ರಾಮೀಣ ಭಾಗಗಳಲ್ಲಿ ಎತ್ತುಗಳಿಗೆ ಸಿಂಗರಿಸಿ, ಪೂಜಿಸಿ ವಿಶಿಷ್ಟವಾಗಿ ಹಬ್ಬ ಆಚರಿಸಲಾಗುತ್ತದೆ. ಆದರೆ ವಿಜಯನಗರದ ಹಗರಿಬೊಮ್ಮನ ಹಳ್ಳಿಯ ಪೂಜಾರಿ ಸಿದ್ದಪ್ಪ ಎಂಬಾತ ತನ್ನ ಎತ್ತಿನ ಮೈಮೇಲೆ ಈ ರೀತಿ ಬರೆದಿದ್ದಾನೆ.
ಇದನ್ನೂ ಓದಿ:ರಾಹುಲ್ ಗಾಂಧಿ ವಿಚಾರಣೆ ರಾಜಕೀಯ ಪ್ರೇರಿತವಲ್ಲ: ಎಸ್.ಟಿ.ಸೋಮಶೇಖರ್