ಚಿಕ್ಕಮಗಳೂರು :ಗೂಳಿಹಟ್ಟಿ ಚಂದ್ರಶೇಖರ್ ಹೇಳಿಕೆಗೆ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ’’ಉದ್ದೇಶ ಪೂರ್ವಕವಾಗಿ ಅಪಪ್ರಚಾರ ಮಾಡಿದ್ರೆ 7 ಜನ್ಮದ ಪಾಪ ಅಂಟುತ್ತೆ. ಅವರು ಯಾವ ಕಾರಣಕ್ಕೆ ಹೇಳಿದ್ದಾರೋ ಗೊತ್ತಿಲ್ಲ. ನಾನು 38 ವರ್ಷದಿಂದ ಸ್ವಯಂ ಸೇವಕ. ಯಾವತ್ತೂ, ಯಾರನ್ನೂ ಜಾತಿ ಕೇಳಿಲ್ಲ. ಅಲ್ಲಿ ಜಾತಿ ಕೇಳುವ ವ್ಯವಸ್ಥೆಯೂ ಇಲ್ಲ ಎಂದು ಹೇಳಿದ್ದಾರೆ.
’’ನಾಗ್ಪುರದಲ್ಲಿ ತಿಂಗಳಿದ್ದೆ, ಅಲ್ಲಿ ನೋಂದಣಿ, ಜಾತಿ ಪದ್ದತಿಯೇ ಇಲ್ಲ. ಅವರು ಹೇಳಿಲ್ಲ ಅನಿಸುತ್ತದೆ, ಹೇಳಿದ್ರೆ ಕಪೋಲ ಕಲ್ಪಿತ ಜಗತ್ತಿನಲ್ಲಿ ಯಾರು ಬೇಕಾದ್ರು, ಯಾವ ಮಾಧ್ಯಮ ಬೇಕಾದ್ರು ಯಾವುದೇ ಸಂದರ್ಭದಲ್ಲಿ ರಿಯಾಲಿಟಿ ಚೆಕ್ ಮಾಡ್ಲಿ. ಹಿಂದೂಗಳ ಏಕತೆಗೆ ಶ್ರಮಿಸುತ್ತಿರುವ ಸಂಸ್ಥೆ ಬಗ್ಗೆ ಅಪಪ್ರಚಾರ ಮಾಡಬಾರದು. ಸಂಘದ ಶಿಬಿರಕ್ಕೆ ಬಂದು ಗಾಂಧೀಜಿ ಪ್ರಶಂಸೆ ಮಾಡಿದ್ರು. ಅಂಬೇಡ್ಕರ್ ಬಂದು ನನ್ನ ಕಲ್ಪನೆಯ ಭಾರತವನ್ನು ಇಲ್ಲಿ ಕಂಡೆ ಎಂದಿದ್ರು. ಅಪಪ್ರಚಾರ, ಅಪನಂಬಿಕೆ ಹುಟ್ಟು ಹಾಕೋದು ತಪ್ಪಾಗುತ್ತೆ‘‘ ಎಂದು ಹೇಳಿದರು.
ಇದನ್ನೂ ಓದಿ :ಮುಸ್ಲಿಂ ಸಮುದಾಯಕ್ಕೆ ಸಿಎಂ ಅನುದಾನ ಘೋಷಣೆ ವಿಚಾರ: ವಿಧಾನಸಭೆಯಲ್ಲಿ ಗದ್ದಲ, ಬಿಜೆಪಿ ಸಭಾತ್ಯಾಗ