ಚಿಕ್ಕಮಗಳೂರು :ಇಂತಹ ಪ್ರಕರಣಗಳು ನಡೆದಾಗ ಆಡಳಿತ ಪಕ್ಷದವರು ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷದವರು ಕೇಳೋದು ಸ್ವಾಭಾವಿಕ. ನಾವು ವಿಪಕ್ಷದಲ್ಲಿದ್ದರೂ ಅದನ್ನೇ ಮಾಡುತ್ತಿದ್ದೆವು. ಸಚಿವ ಕೆ.ಎಸ್ ಈಶ್ವರಪ್ಪ ವಯಸ್ಸು, ಅನುಭವ ಎರಡರಲ್ಲೂ ದೊಡ್ಡವರು. ಸಾರ್ವಜನಿಕ ಸಂಶಯ ದೂರವಾಗಿಸಲು ಮುಖ್ಯಮಂತ್ರಿ ಬೊಮ್ಮಾಯಿ, ಸಚಿವ ಈಶ್ವರಪ್ಪ ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ ಎಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಪಕ್ಷದಿಂದ ಯಾವುದೇ ಸೂಚನೆ ನೀಡಿಲ್ಲ. ಪ್ರಕರಣದಲ್ಲಿ ಮೇಲ್ನೋಟಕ್ಕೆ ಈಶ್ವರಪ್ಪನವರ ಪಾತ್ರ ಕಂಡು ಬಂದಿಲ್ಲ. ನಾನು ಹೇಳಿದ್ರೆ ಯಾರೂ ನಂಬಲ್ಲ. ನಾನು ತನಿಖಾ ಏಜೆನ್ಸಿ ಅಲ್ಲ. ಕಾಂಗ್ರೆಸ್ ಅಥವಾ ಬೇರೆಯವರು ದಾಖಲೆ ಇದ್ರೆ ತನಿಖಾ ಸಂಸ್ಥೆ ಮುಂದೆ ಸಲ್ಲಿಸಲಿ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸ್ತಾರೆ ಎಂದು ಹೇಳಿದರು.