ಚಿಕ್ಕಮಗಳೂರು:ಎನ್ಎಸ್ಯುಐ ಮತ್ತು ಕಾಂಗ್ರೆಸ್ಸಿಗರಿಗೆ ಮಾಡಲು ಕೆಲಸವಿಲ್ಲ, ಚಡ್ಡಿ ಸುಟ್ಕೊಂಡು ಇರಲಿ. ನಮ್ಮ ಹಳೇ ಚಡ್ಡಿಗಳೇ ಇದಾವೆ, ಅವುಗಳನ್ನು ಕಳಿಸಿಕೊಡುತ್ತೇವೆ, ಸುಟ್ಕಂಡ್ ಇರಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಠೇವಣಿ ಹೋಗಿದೆ, ಕರ್ನಾಟಕದಲ್ಲೂ ಠೇವಣಿ ಕಳೆದುಕೊಳ್ಳುತ್ತಾರೆ. ದುರಹಂಕಾರ, ವೋಲೈಕೆ ರಾಜಕಾರಣವನ್ನ ರಾಜ್ಯದ ಜನ ಒಪ್ಪಲ್ಲ, ಕ್ಷಮಿಸಲ್ಲ. ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಬಿದ್ದಾಗ ಡಿಕೆಶಿ-ಸಿದ್ದು ಬಾಯಿ ಬಂದ್ ಆಗಿತ್ತು. ಯಾಕೆಂದರೆ ಬೆಂಕಿ ಇಟ್ಟವರೆಲ್ಲ ಅವರ ಸಹೋದರರು ಎಂದು ವ್ಯಂಗ್ಯವಾಡಿದರು.
ಅವರು ಚಡ್ಡಿ ಸುಟ್ಕೊಂಡು ಇರಲಿ, ನಮ್ಮ ಹಳೇ ಚಡ್ಡಿ ಕೊಡ್ತೇವೆ ಎಂದ ಸಿ ಟಿ ರವಿ ಪಠ್ಯ ಪುಸ್ತಕದಲ್ಲಿ ಹೆಡ್ಗೇವಾರ್ ಭಾಷಣ ಇರಬೇಕೋ, ಬೇಡ್ವೋ ಅನ್ನೋದನ್ನ ಕೇಳೋಕೆ ಇವರ್ಯಾರು. ಪಠ್ಯಪುಸ್ತಕ ಪರಿಷ್ಕರಣ ಸಮಿತಿ ತೀರ್ಮಾನ ಮಾಡಿದೆ, ಸರ್ಕಾರ ಒಪ್ಪಿದೆ. ಮಧ್ಯೆದಲ್ಲಿ ನಂದು ಎಲ್ಲಿಡಲಿ ಅಂತಾ ಕೇಳೋಕೆ ಇವರ್ಯಾರು? ಇವರು ಹೇಳಿದ ಹಾಗೆ ಕೇಳೋಕೆ ಆಗುತ್ತಾ...? ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ಕಾಂಗ್ರೆಸ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿತ್ತು. ಅವರಿಗೆ ಭಾರತ ರತ್ನ ಕೊಡುವಂತೆ ಶಿಫಾರಸ್ಸು ಮಾಡಿದ್ದು, ಅಟಲ್ ಬಿಹಾರಿ ವಾಜಪೇಯಿ ಅವರು. ಸಿದ್ದರಾಮಯ್ಯನೂ ಅಲ್ಲ, ಕಾಂಗ್ರೆಸ್ ಪಾರ್ಟಿಯೂ ಅಲ್ಲ. ಹೆಜ್ಜೆ ಹೆಜ್ಜೆಗೂ ಕಾಂಗ್ರೆಸ್ ಪಾರ್ಟಿ ಅಂಬೇಡ್ಕರ್ ಅವರನ್ನು ತುಳಿಯುತ್ತಲೇ ಬಂತು. ಇಂಥವರು ನಮಗೆ ಅಂಬೇಡ್ಕರ್ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ ಎಂದು ಸಿ ಟಿ ರವಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ನೀವು ಯಾರದಾದರೂ ಚಡ್ಡಿ ಬಿಚ್ಚಿಸಿಕೊಳ್ಳಿ, ಜನರ ಚಡ್ಡಿ ಬಿಚ್ಚಿಸೋ ಕೆಲಸ ಮಾಡಬೇಡಿ: ಕುಮಾರಸ್ವಾಮಿ