ಚಿಕ್ಕಮಗಳೂರು: ಕಾಂಗ್ರೆಸ್ಸಿಗರೇ ನೀವೆಲ್ಲಾ ಆರ್ಥಿಕವಾಗಿ ತಾಕತ್ತು ಹೊಂದಿದವರು. ನಿಮ್ಮ ಆಸ್ತಿಗಳು ಕೂಡ ಚಿಕ್ಕ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿವೆ. ಅದು ಸದುಪಯೋಗ ಆಗಬೇಕಾದರೆ, ಪುಣ್ಯದ ಕೆಲಸ ಮಾಡಬೇಕು. ಟ್ವೀಟ್ ಮಾಡೋ ಬದಲು, 5-10 ಗ್ರಾಮಗಳನ್ನ ದತ್ತು ಪಡೆದುಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ. ಹೇಳಿದ್ದಾರೆ.
ಟೀಕೆ ಬಿಟ್ಟು ಕಷ್ಟದಲ್ಲಿರುವವರ ನೆರವಿಗೆ ಬನ್ನಿ: ಕಾಂಗ್ರೆಸ್ ನಾಯಕರಿಗೆ ಸಚಿವ ಸಿ.ಟಿ. ರವಿ ಆಹ್ವಾನ - adopting villages
ಎಲ್ಲವನ್ನೂ ಪ್ರಶ್ನಿಸುವ ಬದಲು ಗ್ರಾಮಗಳನ್ನು ದತ್ತು ತೆಗೆದುಕೊಳ್ಳಿ. ಕಷ್ಟದಲ್ಲಿರುವವರ ನೆರವಿಗೆ ಬನ್ನಿ. ಆಗ ಆರೋಗ್ಯಕರ ಸ್ಪರ್ಧೆ ಬೆಳೆಯುತ್ತದೆ. ನೀವು ಗ್ರಾಮ ದತ್ತು ತೆಗೆದುಕೊಂಡರೆ ಉಳಿದ ಪಕ್ಷಗಳ ನಾಯಕರು ಕೂಡಾ ಆ ಕೆಲಸಕ್ಕೆ ಮುಂದಾಗುತ್ತಾರೆ ಎಂದು ಸಚಿವ ಸಿ.ಟಿ. ರವಿ ಕಾಂಗ್ರೆಸ್ಸಿಗರಿಗೆ ಕಿವಿಮಾತು ಹೇಳಿದ್ದಾರೆ.
![ಟೀಕೆ ಬಿಟ್ಟು ಕಷ್ಟದಲ್ಲಿರುವವರ ನೆರವಿಗೆ ಬನ್ನಿ: ಕಾಂಗ್ರೆಸ್ ನಾಯಕರಿಗೆ ಸಚಿವ ಸಿ.ಟಿ. ರವಿ ಆಹ್ವಾನ](https://etvbharatimages.akamaized.net/etvbharat/prod-images/768-512-4499214-thumbnail-3x2-med.jpg)
ct ravi
ಕಾಂಗ್ರೆಸ್ಸಿಗರಿಗೆ ಕಿವಿಮಾತು ಹೇಳಿದ ಸಿ ಟಿ ರವಿ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರೇ ನಿಮ್ಮ ರಾಜಕೀಯ ಬಿಟ್ಟು ಕಷ್ಟದಲ್ಲಿರುವವರ ನೆರವಿಗೆ ಬನ್ನಿ. ಆಗ ಆರೋಗ್ಯಕರ ಸ್ಪರ್ಧೆ ಬೆಳೆಯುತ್ತದೆ. ನೀವು 10 ಗ್ರಾಮ ಪಡೆದ್ರೆ, ಬಿಜೆಪಿಯವರು 20 ಗ್ರಾಮ ಪಡೆಯುತ್ತೇವೆ. ನಾವೇನಾದರೂ ಮಾಡಬೇಕೆಂದು ಆಗ ಜೆಡಿಎಸ್‍ನವರು 8-10 ಗ್ರಾಮಗಳನ್ನು ದತ್ತು ಪಡೆಯುತ್ತಾರೆ ಎಂದರು.
ಇನ್ನು, ವಿಜಯನಗರ ಜಿಲ್ಲೆ ಮಾಡಬೇಕು ಎಂಬುದು ಅಲ್ಲಿನ ಶಾಸಕರ ಒತ್ತಡ. ಅದು ಇನ್ನೂ ಸಂಪುಟದ ಮುಂದೆ ಬಂದಿಲ್ಲ. ಆ ಸಂದರ್ಭ ಬಂದಾಗ ಅದರ ಸಾಧಕ-ಬಾಧಕಗಳ ಕುರಿತು ಚರ್ಚಿಸೋಣ. ಸಿಎಂ ಯಡಿಯೂರಪ್ಪ ಅವರು ಆ ಭಾಗದ ಜನರ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.