ಚಿಕ್ಕಮಗಳೂರು : ಯತ್ನಾಳ್ ಅವರು ಹಿರಿಯರು, ಅವತ್ತೇ ಹೇಳಿದ್ದೆ, ನನ್ನ ಬಗ್ಗೆ ಅವರಿಗೆ ಪ್ರೀತಿ ಇದೆ. ಪ್ರೀತಿಯಿಂದ ಮಾತನಾಡ್ತಾರೆ ಬೇಸರವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಸಿಎಂ ಮತ್ತು ವಿಜಯೇಂದ್ರ ಬಗ್ಗೆ ಪದೇ ಪದೆ ಶಾಸಕ ಯತ್ನಾಳ್ ಹೇಳಿಕೆ ನೀಡುತ್ತಿರುವುದರ ಬಗ್ಗೆ ಮಾತನಾಡುದ ಅವರು, ನಾನು ಕೂಡ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ನರೇಂದ್ರ ಮೋದಿಯ ಬೆಂಬಲಿಗನೂ ಹೌದು. ಇದು ಹೇಳಲು ನನಗೆ ಹೆಮ್ಮೆಯಿದೆ, ಯತ್ನಾಳ್ ಅವರು ಹಿರಿಯರು. ಅವತ್ತೇ ಹೇಳಿದ್ದೆ ನನ್ನ ಬಗ್ಗೆ ಅವರಿಗೆ ಪ್ರೀತಿ ಇದೆ. ಪ್ರೀತಿಯಿಂದ ಮಾತನಾಡ್ತಾರೆ ಬೇಸರವಿಲ್ಲ ಎಂದರು.