ಕರ್ನಾಟಕ

karnataka

ETV Bharat / state

ರಾಸುಗಳ ಶರವೇಗದ ಓಟ: ಸಖರಾಯಪಟ್ಟಣದಲ್ಲಿ ಧೂಳೆಬ್ಬಿಸಿದ ಜೋಡೆತ್ತಿನ ಗಾಡಿ ಸ್ಪರ್ಧೆ - ಗಮನಸೆಳೆದ ಜೋಡೆತ್ತಿನ ಗಾಡಿ ಸ್ಪರ್ಧೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಎತ್ತುಗಳಿಗಾಗಿಯೇ ಜೋಡೆತ್ತಿನ ಗಾಡಿ ಸ್ಪರ್ಧೆ ಏರ್ಪಡಿಸಿದ್ದರು. ರಾಜ್ಯದ ಮೂಲೆ ಮೂಲೆಗಳಿಂದ ಬಂದು ಯುದ್ಧಕ್ಕೆ ಸನ್ನದ್ಧರಾಗಿದ್ದಂತಹ ಜೋಡಿ ಎತ್ತು ಗಾಡಿ ಸ್ಪರ್ಧೆ ನೋಡುಗರ ಗಮನ ಸೆಳೆದಿರುವ ಕುರಿತ ಒಂದು ವರದಿ ಇಲ್ಲಿದೇ ನೋಡಿ..

ಜೋಡೆತ್ತಿನ ಗಾಡಿ ಸ್ಪರ್ಧೆ
Bullock Cart racing

By

Published : Mar 9, 2021, 7:58 PM IST

ಚಿಕ್ಕಮಗಳೂರು:ರೈತರು ಈ ದೇಶದ ಬೆನ್ನೆಲುಬು. ಆ ರೈತನ ಬೆನ್ನೆಲುಬು ರಾಸುಗಳು. ಅಂತಹ ರಾಸುಗಳಿಗಾಗೇ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಜೋಡೆತ್ತಿನ ಗಾಡಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಶಕುನಾದ್ರಿ ಗೆಳೆಯರ ಬಳಗ ನಡೆಸಿದ ಈ ಸ್ಪರ್ಧೆಗೆ ಹಾಸನ, ಮೈಸೂರು, ಹಾವೇರಿ, ತುಮಕೂರು, ಮಂಡ್ಯ, ಶಿವಮೊಗ್ಗ ಸೇರಿದಂತೆ ರಾಜ್ಯದ ನಾನಾ ಭಾಗದಿಂದ 40 ಕ್ಕೂ ಅಧಿಕ ಜೋಡೆತ್ತುಗಳು ಆಗಮಿಸಿದ್ದವು. ಇದನ್ನು ನೋಡಿದರೇ ಗ್ರಾಮೀಣ ಕ್ರೀಡೆಗಳು ನಶಿಸುತ್ತಿವೆ ಎಂಬ ಮಾತುಗಳು ಜಿಲ್ಲೆಯ ಬಯಲು ಸೀಮೆ ಭಾಗಕ್ಕೆ ಅನ್ವಯವಾಗುವುದಿಲ್ಲ, ಇಲ್ಲಿ ಆಗಿಂದಾಗ್ಗೆ ಇಂತಹ ಗ್ರಾಮೀಣ ಕ್ರೀಡೆಗಳು ನಡೆಯೋದು ತುಂಬಾ ವಿಶೇಷವಾಗಿರುತ್ತದೆ.

ಎಲ್ಲರ ಗಮನಸೆಳೆದ ಜೋಡೆತ್ತಿನ ಗಾಡಿ ಸ್ಪರ್ಧೆ

ಜನರತ್ತ ನುಗ್ಗಿ ಬರೋ ಎತ್ತಿನ ಗಾಡಿಗಳಿಂದ ತಪ್ಪಿಸಿಕೊಳೋದು ಪ್ರೇಕ್ಷಕರ ಹರಸಾಹಸ. ರೈತರು ಸ್ಪರ್ಧೆಗಾಗಿಯೇ ಎತ್ತುಗಳನ್ನ ಮೀಸಲಿಡುತ್ತಾರೆ. ಕೆಲ ರೈತರು ಹೊಲ ಗದ್ದೆಗಳಲ್ಲಿನ ಕೆಲಸ ಮುಗಿದ ಮೇಲೆ ಇಂತಹ ಆಟೋಟಗಳಲ್ಲಿ ತಮ್ಮ ರಾಸುಗಳನ್ನ ಓಡಿಸಿ ಖುಷಿ ಪಡುತ್ತಾರೆ. ಕೆಲವರು ಇಂತಹ ಸ್ಪರ್ಧೆಗಳಿಗಾಗಿಯೇ ರಾಸುಗಳನ್ನ ಸಾಕುತ್ತಾರೆ.

ಸ್ಪರ್ಧೆಗೆ 15 ದಿನ ಮುಂಚಿತವಾಗಿಯೇ ಎತ್ತುಗಳಿಗೆ ವಿಶೇಷ ತರಬೇತಿ ಜೊತೆ ತಯಾರಿಯನ್ನೂ ಮಾಡುತ್ತಾರೆ. ಈ ರಾಸುಗಳಿಗೆ ಪ್ರತಿನಿತ್ಯ ಹಿಂಡಿ, ಬೂಸಾ, ಹಸಿ ಹುಲ್ಲು, ರಾಗಿ ಹುಲ್ಲು, ಮೆಕ್ಕೆಜೋಳದ ಜೊತೆ ಮೊಟ್ಟೆ ಹಾಗೂ ಮೆಂತೆ ಮುದ್ದೆಯನ್ನೂ ನೀಡುತ್ತಾರೆ. ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲೋದಕ್ಕಿಂತ ಭಾಗವಹಿಸೋದೆ ರೈತರಿಗೆ ಅತ್ಯಂತ ಸಂತಸದ ವಿಷಯವಾಗಿದೆ.

ಒಟ್ಟಾರೆಯಾಗಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಶ್ವತ ಬರಗಾಲಕ್ಕೆ ತುತ್ತಾದ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದ ಈ ಸ್ಪರ್ಧೆ ಜನಮನ ಸೆಳೆಯಿತು. ಇಂತಹ ಕಾರ್ಯಕ್ರಮಗಳ ನೆಪದಲ್ಲಾದರೂ ಗ್ರಾಮೀಣ ಕ್ರೀಡೆಗಳು ಉಳಿಯಲಿ, ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಿ ಆಯೋಜನೆಗೊಳ್ಳಲಿ ಎಂಬುದು ಸ್ಥಳೀಯರ ಆಶಯವಾಗಿದೆ.

ABOUT THE AUTHOR

...view details