ಚಿಕ್ಕಮಗಳೂರು:ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಕ್ಷೇತ್ರದಲ್ಲಿ ಬುಲ್ಡೋಜರ್ ಸದ್ದು ಮಾಡುತ್ತಿದೆ. ಅಕ್ರಮವಾಗಿ ಗೋಮಾಂಸ ಸಂಗ್ರಹ ಮಾಡುವ ಅಡ್ಡೆಗಳ ಮೇಲೆ ಚಿಕ್ಕಮಗಳೂರು ನಗರಸಭೆ ದಾಳಿ ಮಾಡಿ ಕಟ್ಟಡಗಳನ್ನು ನೆಲಸಮಗೊಳಿಸುತ್ತಿದೆ. ಗೋಮಾಂಸ ಮಾರಾಟ ಮಾಡುತ್ತಿರುವ ಮನೆಗಳಿಗೆ ನೋಟಿಸ್ ನೀಡಲಾಗುತ್ತಿದೆ. ಈ ಮೂಲಕ ನಗರಸಭೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ನಿಷೇಧಿತ ಸ್ಫೋಟಕ, ಮಾದಕ ವಸ್ತುಗಳು ಸೇರಿದಂತೆ ಗೋಹತ್ಯೆ ಮಾಡಿದರೆ, ನಿಯಮಾನುಸಾರವಾಗಿ ಕಟ್ಟಡ ನೆಲಸಮ ಮಾಡಲಾಗುವುದು ಎಂಬ ನೋಟಿಸ್ ಅನ್ನು ಚಿಕ್ಕಮಗಳೂರು ನಗರಸಭೆ ಅಂಟಿಸಿದೆ. ಕಳೆದ ವಾರ ಗೋಮಾಂಸ ಅಡ್ಡೆಯನ್ನು ಜೆಸಿಬಿ ಮೂಲಕ ನಗರಸಭೆ ನೆಲಸಮ ಮಾಡಲಾಗಿತ್ತು. ಈಗ ಮತ್ತೊಮ್ಮೆ ನೋಟಿಸ್ ನೀಡುವುದರ ಮೂಲಕ ಕಠಿಣ ಕ್ರಮ ಜರಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.