ಚಿಕ್ಕಮಗಳೂರು: ಕಾಫಿ ಸಾಮ್ರಾಟ ದಿವಂಗತ ಸಿದ್ದಾರ್ಥ್ ಹೆಗಡೆ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ವಿನಯ್ ಗುರೂಜಿ ಅವರು, ಬುದ್ಧನ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದಾರೆ.
ದಿವಂಗತ ಸಿದ್ದಾರ್ಥ್ ಹೆಗಡೆ ಸಮಾಧಿ ಬಳಿ ಬುದ್ಧನ ವಿಗ್ರಹ ಪ್ರತಿಷ್ಠಾಪಿಸಿದ ವಿನಯ್ ಗುರೂಜಿ - Buddha statue was erected at the late Siddharth Hegde burial ground
ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಕಾಫಿ ಎಸ್ಟೇಟ್ಗೆ ಭೇಟಿ ನೀಡಿದ ವಿನಯ್ ಗುರೂಜಿ ದಿವಂಗತ ಸಿದ್ದಾರ್ಥ್ ಹೆಗಡೆ ಅವರ ಸಮಾಧಿ ಸ್ಥಳದಲ್ಲಿ ಬುದ್ದನ ವಿಗ್ರಹ ಪ್ರತಿಷ್ಠಾಪಿಸಿದ್ದಾರೆ.
ಬುದ್ಧನ ವಿಗ್ರಹ ಪ್ರತಿಷ್ಠಾಪನೆ
ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಕಾಫಿ ಎಸ್ಟೇಟ್ಗೆ ಭೇಟಿ ನೀಡಿದ ಅವರು, ಸಿದ್ದಾರ್ಥ ಜಗತ್ತಿಗೆ ಜ್ಞಾನ ಕೊಟ್ಟಿದ್ದಾನೆ. ಲಕ್ಷಾಂತರ ಜನರಿಗೆ ಉದ್ಯೋಗ ಕೊಟ್ಟಿದ್ದಾನೆ ಎಂಬ ಉದ್ದೇಶದಿಂದ ಸಮಾಧಿ ಸ್ಥಳದಲ್ಲಿ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ವೇಳೆ, ಸಿದ್ಧಾರ್ಥ್ ಅವರ ತಾಯಿ ವಾಸಂತಿ ಹೆಗಡೆ ಹಾಗೂ ಕುಟುಂಬದ ಆಪ್ತರು ಉಪಸ್ಥಿತರಿದ್ದರು.
ನಂತರ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಗುರೂಜಿ, ದೇವಿಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.