ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯ ವಿನಯ ಗುರೂಜಿ ಆಶ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೇವರ ಹಣೆಯಿಂದ ಪ್ರಸಾದ ದೊರೆತಿರುವ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ವೆಂಕಟೇಶನಿಂದ ಬಿಎಸ್ವೈಗೆ ಪ್ರಸಾದ... ಚರ್ಚೆಗೆ ಗ್ರಾಸ! - ಚಿಕ್ಕಮಗಳೂರು
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ದೇವರ ಹಣೆಯಿಂದ ಪ್ರಸಾದ ದೊರೆತಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೊಪ್ಪ ತಾಲೂಕಿನ ಗೌರಿಗದ್ದೆಯ ವಿನಯ ಗುರೂಜಿ ಆಶ್ರಮದಲ್ಲಿ ಬಿಎಸ್ವೈ ಪೂಜೆ ಸಲ್ಲಿಸುವ ವೇಳೆ ಬಲಭಾಗಕ್ಕೆ ಬಿದ್ದ ವಿಗ್ರಹದ ನಾಮ ಈಗ ಚರ್ಚೆಗೆ ಗ್ರಾಸವಾಗಿದೆ.
ಸದ್ಯ ಇದು ಶುಭ ಪ್ರಸಾದನಾ ಎನ್ನುವ ರೀತಿಯಲ್ಲಿ ಚರ್ಚೆ ಆಗುತ್ತಿದೆ.ಕಳೆದ ಗುರುವಾರ ವಿನಯ ಗುರೂಜಿ ನೇತೃತ್ವದಲ್ಲಿ ಆಶ್ರಮದಲ್ಲಿ ವಿಷ್ಣು ಸಹಸ್ರನಾಮ ನೆರೆವೇರಿಸಲಾಗಿತ್ತು. ವಿನಯ ಗುರೂಜಿ ಆಶ್ರಮದಲ್ಲಿರುವ ವಿಷ್ಣು ವಿಗ್ರಹಕ್ಕೆ ಮಂಗಳಾರತಿ ಮಾಡುವ ವೇಳೆ ಬಲಭಾಗಕ್ಕೆ ಬಿದ್ದ ವಿಗ್ರಹದ ನಾಮ ಬಿಎಸ್ವೈ ಪ್ರಸಾದವಾಗಿ ಸಿಕ್ಕಿತ್ತು.
ನಾಮ ಬಿದ್ದ ತಕ್ಷಣ ಬಿಎಸ್ವೈ, ಶೋಭಾ ಕರಂದ್ಲಾಜೆ ಬಳಿಗೆ ವಿನಯ ಗುರೂಜಿ ಆಗಮಿಸಿ ಇಬ್ಬರ ಜೊತೆ ಮಾತಾಡಿ ಪೂಜೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸಂಸದೆ ಶೋಭ ಕರಂದ್ಲಾಜೆ, ಸಚಿವ ಸಿ.ಟಿ.ರವಿ ಹಾಗೂ ಶೃಂಗೇರಿ ಶಾಸಕ ರಾಜೇಗೌಡ ಬಿ ಎಸ್ ವೈಗೆ ಸಾಥ್ ನೀಡಿದರು. ಇನ್ನು ಈ ಬಗ್ಗೆ ಬಿಎಸ್ವೈಗೆ ಒಳ್ಳೆಯ ಶಕುನವೆಂದು ಕೆಲವರು ಹೇಳುತ್ತಿದ್ದರೆ ಮತ್ತೆ ಕೆಲವರು ಅಪಶುಕನ ಎನ್ನುವ ರೀತಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ.