ಕರ್ನಾಟಕ

karnataka

ETV Bharat / state

ಮನೆ ಮುಂದೆ ಆಡುತ್ತಿದ್ದ ಬಾಲಕನ ಮೇಲೆ ಹರಿದ ಲಾರಿ... ಅರಳುವ ಮುನ್ನವೇ ಮುದುಡಿದ ಜೀವ - ಚಿಕ್ಕಮಗಳೂರು ಅಪಘಾತ ಸುದ್ದಿ

ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದಾಗ ಲಾರಿ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಲಾರಿ ನುಗ್ಗಿದ ರಭಸಕ್ಕೆ ಕಾಫಿ ತೋಟದ ಲೈನ್ ಮನೆಯ ಅರ್ಧಭಾಗ ಸಂಪೂರ್ಣ ಜಖಂ ಆಗಿದೆ.

boy dies as lorry passes on him
ಬಾಲಕ ಸಾವು

By

Published : Aug 13, 2020, 6:07 PM IST

ಚಿಕ್ಕಮಗಳೂರು: ಮನೆಯ ಮುಂಭಾಗ ಆಟವಾಡುತ್ತಿದ್ದ ಬಾಲಕನ ಮೇಲೆ ಲಾರಿ ಹರಿದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆ ಗ್ರಾಮದಲ್ಲಿ ಈ ದುರಂತ ನಡೆದಿದ್ದು, ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಬಾಲಕ ಸುರೇಶ್ (10) ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಲಾರಿ ನುಗ್ಗಿದ ರಭಸಕ್ಕೆ ಕಾಫಿ ತೋಟದ ಲೈನ್ ಮನೆಯ ಅರ್ಧಭಾಗ ಸಂಪೂರ್ಣ ಜಖಂ ಆಗಿದೆ.

ಬಾಲಕ ಸಾವು

ಮಂಜುನಾಥಗೌಡ ಎಂಬುವರ ಲೈನ್ ಮನೆಯ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಚಿಕ್ಕಮಗಳೂರಿನಿಂದ ಕುಂದಾಪುರ ಮಾರ್ಗವಾಗಿ ಹೋಗುತ್ತಿದ್ದ ತರಕಾರಿ ಲಾರಿಯಿಂದ ಈ ಅವಘಡ ನಡೆದಿದೆ.

ಮನೆಯ ಅರ್ಧಭಾಗ ಜಖಂ

ಬಾಳೆಹೊನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details