ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಿನಲ್ಲಿ ಬಾಡಿ ಬಿಲ್ಡರ್ ಯುವಕನ ಬರ್ಬರ ಹತ್ಯೆ - ಬಾಡಿ ಬಿಲ್ಡರ್ ಯುವಕನ ಬರ್ಬರ ಹತ್ಯೆ

ಮನು ಎಂಬ ಯುವಕನನ್ನು ಅನ್ಯಕೋಮಿನ ಯುವಕರು ಕೊಲೆ ಮಾಡಿದ್ದಾರೆ ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದಾರೆ.

Bodybuilder murdered in Chikmagalur
ಚಿಕ್ಕಮಗಳೂರಿನಲ್ಲಿ ಬಾಡಿ ಬಿಲ್ಡರ್ ಯುವಕನ ಬರ್ಬರ ಹತ್ಯೆ

By

Published : Apr 9, 2021, 1:12 PM IST

ಚಿಕ್ಕಮಗಳೂರು: ನಗರದಲ್ಲಿ ಬಾಡಿ ಬಿಲ್ಡರ್ ಯುವಕನ ಕೊಲೆಯಾಗಿದ್ದು, ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಮನು (21) ಕೊಲೆಯಾದ ಯುವಕ. ಈತ ಹಿಂದೂಪರ ಸಂಘಟನೆಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದು, ಅನ್ಯಕೋಮಿನ ಯುವಕರಿಂದ ಕೊಲೆ ನಡೆದಿದೆ ಎಂಬ ಆರೋಪವಿದೆ. ಮನು ಚಿಕ್ಕಮಗಳೂರು ಬಾಡಿ ಬಿಲ್ಡರ್ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ ಎನ್ನಲಾಗಿದೆ.

ಬುಧವಾರ ರಾತ್ರಿ ಯುವಕನ ಮೇಲೆ ಅಯ್ಯಪ್ಪ ನಗರದಲ್ಲಿ ತೀವ್ರವಾಗಿ ಹಲ್ಲೆ ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾನೆ.

ಮೃತ ಯುವಕನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಹಿಂದೂ ಪರ ಸಂಘಟನೆಗಳು, ಚಿಕ್ಕಮಗಳೂರು ನಗರ ಬಂದ್‌ಗೆ ಕರೆ ನೀಡಿದ್ದಾರೆ. ಪರಿಣಾಮ, ಎಂ.ಜಿ.ರಸ್ತೆಯಲ್ಲಿ ಅಂಗಡಿಗಳ ಬಾಗಿಲು ಹಾಕಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಇದೇ ವೇಳೆ ಸಿಪಿಐ ಸಲೀಂ ವಿರುದ್ಧ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಒಂದು ಕೋಮಿನ ಪರ ಇದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಹನುಮಂತಪ್ಪ ವೃತ್ತದಲ್ಲಿ ನೂರಾರು ಹಿಂದು ಕಾರ್ಯಕರ್ತರು ಸೇರಿ ಬೃಹತ್ ಪ್ರತಿಭಟನೆ ನಡೆಸಿದರು. ಈ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ಓರ್ವ ಆರೋಪಿಯನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಕಾರು ಕೊಡಿಸೋದಾಗಿ ಕೋಟ್ಯಂತರ ವಂಚನೆ, ಮದುವೆ ನೆಪದಲ್ಲಿ ಮೂವರಿಗೆ ಮೋಸ: ನಕಲಿ ಸೇನಾಧಿಕಾರಿಯ ಅಸಲಿ ರೂಪ!

ABOUT THE AUTHOR

...view details