ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಿನಲ್ಲಿ ಹಿಜಾಬ್​​ಗೆ ವಿದ್ಯಾರ್ಥಿಗಳು ಬೆಂಬಲ.. ಕೇಸರಿ ವಿರುದ್ಧ ನಿಂತ ನೀಲಿ ಶಾಲಿನ ಹುಡುಗರು! - ಚಿಕ್ಕಮಗಳೂರು ಕಾಲೇಜಿನಲ್ಲಿ ನೀಲಿ ಶಾಲು ವಿವಾದ

ರಾಜ್ಯದ ನಾನಾ ಜಿಲ್ಲೆಗಳಲ್ಲಿ ಹಿಜಾಬ್​ ವಿರುದ್ಧ ವಿದ್ಯಾರ್ಥಿಗಳು ಕೇಸರಿ ಶಾಲುಗಳು ಪ್ರದರ್ಶಿಸಿ ತಮ್ಮ ಹೋರಾಟವನ್ನು ನಡೆಸುತ್ತಿದ್ದರು. ಈಗ ಕೇಸರಿ ವಿರುದ್ಧ ನೀಲಿ ಶಾಲಿನ ವಿದ್ಯಾರ್ಥಿಗಳು ಹಿಜಾಬ್​ಗೆ ಬೆಂಬಲ ಸೂಚಿಸಿ ಹೋರಾಟ ನಡೆಸುತ್ತಿರುವ ಘಟನೆ ಚಿಕ್ಕಮಗಳುರು ಜಿಲ್ಲೆಯಲ್ಲಿ ನಡೆದಿದೆ.

Blue Shawl row in Chikmagalur, Blue Shawl row in College, Blue Shawl row in College at Chikmagalur, Chikmagalur news, ಚಿಕ್ಕಮಗಳೂರಿನಲ್ಲಿ ನೀಲಿ ಶಾಲು ವಿವಾದ, ಕಾಲೇಜ್​ನಲ್ಲಿ ನೀಲಿ ಶಾಲು ವಿವಾದ, ಚಿಕ್ಕಮಗಳೂರು ಕಾಲೇಜಿನಲ್ಲಿ ನೀಲಿ ಶಾಲು ವಿವಾದ, ಚಿಕ್ಕಮಗಳುರು ಸುದ್ದಿ,
ಕೇಸರಿ ವಿರುದ್ಧ ನಿಂತ ನೀಲಿ ಶಾಲಿನ ಹುಡುಗರು

By

Published : Feb 7, 2022, 1:49 PM IST

ಚಿಕ್ಕಮಗಳೂರು :ಹಿಜಾಬ್ ವಿರುದ್ಧ ಧ್ವನಿಯೆತ್ತಲು ವಿದ್ಯಾರ್ಥಿಗಳು ಕೇಸರಿ ಶಾಲುಗಳ ಹಾಕಿಕೊಂಡು ಹೋರಾಟ ನಡೆಸುತ್ತಿದ್ದಾರೆ. ಆದರೆ ಈ ಕೇಸರಿ ಶಾಲು ವಿದ್ಯಾರ್ಥಿಗಳ ವಿರುದ್ಧವಾಗಿ ನೀಲಿ ಶಾಲು ಹಾಕಿಕೊಂಡು ವಿದ್ಯಾರ್ಥಿಗಳು ಹಿಜಾಬ್​ಗೆ ಬೆಂಬಲ ಸೂಚಿಸುತ್ತಿದ್ದಾರೆ.

ಕೇಸರಿ ವಿರುದ್ಧ ನಿಂತ ನೀಲಿ ಶಾಲಿನ ಹುಡುಗರು

ಚಿಕ್ಕಮಗಳೂರು ಐಡಿಎಸ್​ಜಿ ಕಾಲೇಜಿನಲ್ಲಿ ನೀಲಿ ಶಾಲು ಪ್ರತ್ಯಕ್ಷವಾಗಿದೆ. ಕಾಲೇಜ್​ನಲ್ಲಿ ಹಿಜಾಬ್​ ತೆಗೆಸಬಾರದು ಎಂದು ನೀಲಿ ಶಾಲು ಧರಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಜೈ ಭೀಮ್ ಘೋಷಣೆ ಕೂಗುತ್ತಾ ಕೆಲ ನೀಲಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಪ್ರತಿಯಾಗಿ ಕೇಸರಿ ಶಾಲು ಧರಿಸಿರುವ ವಿದ್ಯಾರ್ಥಿಗಳಿಂದ ಜೈ ಶ್ರೀರಾಮ್ ಘೋಷಣೆಯಾಗುತ್ತಿದೆ.

ಓದಿ:ಮೈಸೂರು: ತಿಂಡಿ ತಿನ್ನಲು ಬಂದ ವಿದ್ಯಾರ್ಥಿ ಹೋಟೆಲ್​ನಲ್ಲೇ ಹೃದಯಾಘಾತದಿಂದ ಸಾವು! ವಿಡಿಯೋ

ಮೊದಲಿನಿಂದಲೂ ಕಾಲೇಜ್​ನಲ್ಲಿ ಹಿಜಾಬ್​ ಸಂಸ್ಕೃತಿ ನಡೆಯುತ್ತಲೇ ಬಂದಿದೆ. ಈಗ ಏಕೆ ಹಿಜಾಬ್​ ತಿರಸ್ಕರಿಸಬೇಕು. ಅವರಿಂದ ನಮಗೇನು ನಷ್ಟವಾಗಿದೆ ಎಂದು ನೀಲಿ ಶಾಲಿನ ವಿದ್ಯಾರ್ಥಿಗಳ ವಾದವಾಗಿದೆ. ದಿನದಿಂದ ದಿನಕ್ಕೆ ಕಾಲೇಜಿನಲ್ಲಿ ವಿವಾದ ನಾನಾ ತಿರುವುಗಳನ್ನು ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಯಾವುದಕ್ಕೆ ಈ ಪ್ರಕರಣ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details