ಚಿಕ್ಕಮಗಳೂರು: ರಾಜ್ಯಪಾಲರು ಕೋವಿಡ್ ಸಂಬಂಧ ಸಭೆ ಕರೆದರೆ ಅವರಿಗೆ ಸಾಂವಿಧಾನಿಕ ಅಧಿಕಾರ ಇದೆಯಾ ಅಂತಾ ಕೇಳ್ತಿರಿ. ಪ್ರಧಾನಿಯವರು ಸಭೆ ನಡೆಸಿದ್ರೆ ಅವರೇನು ಹೆಡ್ ಮಾಸ್ಟರಾ ಅಂತಾ ಪ್ರಶ್ನಿಸುತ್ತೀರಿ. ಸಿದ್ದರಾಮಯ್ಯನವರೇ ಏನಾಗಿದೆ ನಿಮ್ಮ ತಲೆಗೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯನವರೇ ಏನಾಗಿದೆ ನಿಮ್ಮ ತಲೆಗೆ : ಸಿ.ಟಿ. ರವಿ ಗರಂ - ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿ
ಸಿದ್ದರಾಮಯ್ಯನವರೇ, ಏನಾಗಿದೆ ನಿಮ್ಮ ತಲೆಗೆ. ಇದು ರಾಜಕಾರಣ ಮಾಡುವ ಸಮಯಾನಾ...? ಇದು ಕರ್ತವ್ಯ ನಿರ್ವಹಿಸೋ ಸಂದರ್ಭ, ಅಧಿಕಾರ ಚಲಾಯಿಸೋದಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿಕಾರಿದ್ದಾರೆ.
Ct ravi
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಇದು ರಾಜಕಾರಣ ಮಾಡುವ ಸಮಯಾನಾ..? ಇದು ಕರ್ತವ್ಯ ನಿರ್ವಹಿಸೋ ಸಂದರ್ಭ, ಅಧಿಕಾರ ಚಲಾಯಿಸೋದಲ್ಲ ಎಂದು ಟಾಂಗ್ ಕೊಟ್ಟರು.
ಮೋದಿ ಜಾಗದಲ್ಲಿ ಮತ್ತೊಬ್ಬರ ಕಲ್ಪನೆಯನ್ನೂ ಮಾಡಿಕೊಳ್ಳಲಾಗಲ್ಲ. ಹಾಗೇ ಕಲ್ಪನೆ ಮಾಡಿಕೊಂಡ್ರೆ ಇಂದಿನ ಸ್ಥಿತಿ ಇನ್ನೂ ಗಂಭೀರವಾಗಿರುತ್ತಿತ್ತು ಎಂದು ಕಾಂಗ್ರೆಸ್‍ಗೆ ಶಾಸಕ ಸಿ.ಟಿ ರವಿ ತಿವಿದರು.
Last Updated : Apr 27, 2021, 4:48 PM IST